ನವದೆಹಲಿ: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸರುವ ಬಹು ನಿರೀಕ್ಷಿತ 'ಸುಲ್ತಾನ' ಸಿನೆಮಾದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈದ್ ಗೆ ಸಿನೆಮಾ ಜಾಗತಿಕವಾಗಿ ಬಿಡುಗಡೆಯಾಗಲಿದೆಯಂತೆ.
ಸಲ್ಮಾನ್ ಖಾನ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಪೋಸ್ಟರ್ ಬಿಡುಗಡೆ ಮಾಡಿದ್ದು, "ಹರ್ಯಾಣದ ಸಿಂಹ, ಹರ್ಯಾಣದ ಹೆಮ್ಮೆ, ಹರ್ಯಾಣದ ಪ್ರಾಣವನ್ನು ನೋಡಿ" ಎಂದು ಅಡಿಶೀರ್ಷಿಕೆಯಲ್ಲಿ ಬರೆಯಲಾಗಿದೆ.