ಬಾಲಿವುಡ್

ಕರಾಚಿ ಪ್ರತಿಭಟನೆ ಅಲ್ಲಗೆಳೆದ ಕಬೀರ್; ನಿರ್ಲಕ್ಷಿಸುವಂತೆ ಮಾಧ್ಯಮಗಳಿಗೆ ಮನವಿ

Guruprasad Narayana

ಕರಾಚಿ: ತಮ್ಮ ವಿರುದ್ಧ ಮತ್ತು ಭಾರತ ವಿರೋಧಿ ಹೇಳಿಕೆಗಳಿಂದ ಸ್ವಾಗತ ಕೋರಲಾಯಿತು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ 'ಭಜರಂಗಿ ಭಾಯಿಜಾನ್' ಸಿನೆಮಾದ ನಿರ್ದೇಶಕ ಕಬೀರ್ ಖಾನ್, ಇಂತಹ ವರದಿಗಳನ್ನು ನಿರ್ಲಕ್ಷಿಸುವಂತೆ ಎರಡೂ ದೇಶದ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಕರಾಚಿಯಿಂದ ಲಾಹೋರ್ ಗೆ ತೆರಳಲು ವಿಮಾನ ಏರುವುದಕ್ಕೂ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಗಳು ಜಾಗೃತವಾಗಿದ್ದವು ಎಂಬ ವರದಿಯಾಗಿತ್ತು.

"ಕಿರುಚಾಡುತ್ತಿದ್ದ ಹುಚ್ಚರ" ವಿಡಿಯೋ ದೃಶ್ಯವನ್ನು ಸುದ್ದಿಯೆಂದು ಪರಿಗಣಿಸಬಾರದೆಂದು ನಿರ್ದೇಶಕ ಹೇಳಿದ್ದಾರೆ.

"ಎರಡೂ ಕಡೆಯ ಮಾಧ್ಯಮಗಳಿಗೆ: ಮೊಬೈಲ್ ಕ್ಯಾಮರಾದೊಂದಿಗೆ ೧೨ ಜನ ಕಿರುಚುತ್ತಿರುವ ಹುಚ್ಚರು ಸುದ್ದಿಯಲ್ಲ. ಅವರಿಗೆ ಹೆಚ್ಚು ಗಮನ ನೀಡಬೇಡಿ, ನಿರ್ಲಕ್ಷಿಸಿ" ಎಂದು ಕಬೀರ್ ಟ್ವೀಟ್ ಮಾಡಿದ್ದಾರೆ.

ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಕಾರರು ಕಬೀರ್ ಅವರನ್ನು ಸುತ್ತುವರೆದು "ಪಾಕಿಸ್ತಾನದಲ್ಲಿ ಭಾರತೀಯ ಬೇಹುಗಾರಿಕೆ ಸಂಸ್ಥೆ ಆರ್ ಎ ಡಬ್ಲ್ಯು ನಡೆಸಿದ ಪಾತ್ರವನ್ನು ಏಕೆ ಸಿನೆಮಾ ಮಾಡಲಿಲ್ಲ" ಎಂದು ಕೇಳಿದರು ಎಂದು ವರದಿಯಾಗಿತ್ತು.

ಪ್ರತಿಭಟನಾ ನಿರತರಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಖಾನ್ ನೆಡೆಗೆ ಶೂ ತೋರಿಸಿದ್ದ ಎಂದು ಕೂಡ ಡಾನ್ ಪತ್ರಿಕೆ ವರದಿ ಮಾಡಿತ್ತು.

'ಭಜರಂಗಿ ಭಾಯಿಜಾನ್' ಸಿನೆಮಾ ಪಾಕಿಸ್ತಾನದಲ್ಲಿ ನಿಷೇಧವಾಗಿತ್ತು.

SCROLL FOR NEXT