ಕಪಿಲ್ ಶರ್ಮಾ, ಜಾಕ್ವೆಲಿನ್ ಫರ್ನಾಂಡಿಸ್
ಮುಂಬೈ: ವಿಶಿಷ್ಟ ಹಾಸ್ಯದ ಮೂಲಕ ದೇಶ-ವಿದೇಶಗಳಲ್ಲಿ ಜನಪ್ರಿಯತೆಗಳಿಸಿರುವ ಕಪಿಲ್ ಶರ್ಮ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ರನ್ನು ವಿವಾಹವಾಗಿದ್ದಾರೆ. ಹಾಗಂತ ಸ್ವತಃ ಕಪಿಲ್ ಶರ್ಮ ಅವರೇ ಹೇಳಿಕೊಂಡಿದ್ದಾರೆ.
‘ದಿ ಕಪಿಲ್ ಶರ್ಮ ಶೋ’ಗೆ ಅತಿಥಿಯಾಗಿ ಆಗಮಿಸಿದ ಜಾಕ್ವೆಲಿನ್, ಖ್ಯಾತ ಹಾಸ್ಯ ನಟನ ಮಾತಿಗೆ ಮರುಳಾಗಿ ವಿವಾಹವಾಗಲು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದಾಗಿ ವೇದಿಕೆಯಲ್ಲಿಯೇ ವೆಡ್ಡಿಂಗ್ ಸೆಟ್ ನಿರ್ಮಿಸಿ, ಪಕ್ಕಾ ಭಾರತೀಯ ವಧುವಿನಂತೆ ಜಾಕ್ವೆಲಿನ್ ಸಾರಿಯಲ್ಲಿ ಮಿಂಚಿದರೆ, ಕಪಿಲ್ ಶರ್ಮಾ ಶರ್ವಾನಿಯಲ್ಲಿ ಕಂಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಕಪಿಲ್ ಅವರ ತಾಯಿ ಮುಮ್ಮಿ ಶರ್ಮಾ ಕೂಡ ಹಾಜರಿದ್ದು, ನವದಂಪತಿಗೆ ಆಶೀರ್ವದಿಸಿದರು.
ತಮ್ಮ ಮಗ ಜಾಕ್ವೆಲಿನ್ ಅವಳನ್ನು ವಿವಾಹವಾವಾಗಬೇಕೆನ್ನುವುದು ಕಪಿಲ್ ತಾಯಿ ಮುಮ್ಮಿ ಅವರ ಹಲವು ದಿನಗಳ ಬಯಕೆಯಾಗಿತ್ತು. ಅಷ್ಟಕ್ಕೂ ಜಾಕ್ವೆಲಿನ್ ವಿವಾಹಕ್ಕೆ ಸುಲಭವಾಗಿ ಒಪ್ಪಿಕೊಂಡಿಲ್ಲ. ಶಾಫಿಂಗ್ ಹಾಗೂ ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ ಮೇಲೆ ಒಪ್ಪಿಕೊಂಡಿದ್ದಾರೆ ಎಂದು ಕಪಿಲ್ ಟ್ವೀಟ್ ಮಾಡಿದ್ದಾರೆ.
ಜಾಕ್ವೆಲಿನ್ ತಮ್ಮ ಮುಂಬರುವ ಚಿತ್ರ ‘ದಿ ಫ್ಲೈಯಿಂಗ್ ಜಾಟ್’ ಪ್ರಚಾರಕ್ಕಾಗಿ ದಿ ಕಪಿಲ್ ಶರ್ಮ ಶೋಗೆ ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics