ಪಾಕಿಸ್ತಾನದಲ್ಲಿ 'ಫ್ರೀಕಿ ಅಲಿ' ಬಿಡುಗಡೆಯಾಗಿರುವುದು ಸಂತಸವಾಗಿದೆ: ನವಾಜುದ್ದೀನ್ ಸಿದ್ಧಿಕಿ
ಪಾಕಿಸ್ತಾನದಲ್ಲಿ ಫ್ರೀಕಿ ಅಲಿ ಸಿನಿಮಾ ಬಿಡುಗಡೆಯಾಗಿರುವುತು ತುಂಬಾ ಸಂತೋಷ ತಂದಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹರ್ಷ ವ್ಯಕ್ತ ...
ಮುಂಬಯಿ: ಪಾಕಿಸ್ತಾನದಲ್ಲಿ ಫ್ರೀಕಿ ಅಲಿ ಸಿನಿಮಾ ಬಿಡುಗಡೆಯಾಗಿರುವುತು ತುಂಬಾ ಸಂತೋಷ ತಂದಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಉರಿ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು. ಇದಾದ ನಂತರ ಪಾಕಿಸ್ತಾನ ಸಿನಿಮಾ ಪ್ರದರ್ಶಕರು ಹಾಗೂ ಚಿತ್ರಮಂದಿರ ಮಾಲೀಕರು ಭಾರತೀಯ ಸಿನಿಮಾಗಳ ಬಿಡುಗಡೆಗೆ ನಿಷೇಧ ಹೇರಿದ್ದರು.
ಎರಡು ತಿಂಗಳ ನಂತರ ಪಾಕಿಸ್ತಾನ ಸಿನಿಮಾ ಪ್ರದರ್ಶಕರೂ ಭಾರತೀಯ ಚಿತ್ರಗಳಿಗೆ ಹೇರಿದ್ದ ನಿಷೇಧ ತೆರವುಗೊಳಿಸಿದ್ದಾರೆ. ನಿಷೇಧ ತೆರವಿನ ನಂತರ ಬಿಡುಗೆಯಾಗುತ್ತಿರುವ ಮೊದಲ ಭಾರತೀಯ ಸಿನಿಮಾ ಫ್ರೀಕಿ ಅಲಿ ಆಗಿದೆ.
ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿರುವ ಫ್ರೀಕಿ ಅಲಿಯಲ್ಲಿ ನವಾಜುದ್ದೀನ್ ಸಿದ್ಧಿಕಿ, ಅರ್ಬಾಜ್ ಖಾನ್, ಅಮಿ ಜಾಕ್ಸನ್ ನಟಿಸಿದ್ದಾರೆ. ಇನ್ನೂ ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆಯಾಗಿರುವುದು ಸಂತಸ ತಂದಿದೆ. ನಮ್ಮ ಸಿನಿಮಾದ ಕಲೆಕ್ಷನ್ ಕೂಡ ಹೆಚ್ಚಾಗಲಿದೆ ಎಂದು ನವಾಜುದ್ದೀನಿ ಸಿದ್ಧಿಕಿ ಅಭಿಪ್ರಾಯ ಪಟ್ಟಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.