ಬಾಲಿವುಡ್

ಹಳೆಯ ಆದರೆ ಯೋಗ್ಯ ಬ್ರಹ್ಮಚಾರಿ: ಸಲ್ಮಾನ್ ಕಾಲೆಳೆದ ಟ್ವಿಂಕಲ್ ಖನ್ನಾಗೆ ಟ್ವಿಟ್ಟರಾರತಿ

Shilpa D

ನವದೆಹಲಿ: ನಟಿ ಟ್ವಿಂಕಲ್ ಖನ್ನಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಾಲಿವುಡ್  ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಕಾಲೆಳೆದಿರುವ ಟ್ವಿಂಕಲ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರಸಿದ್ಧ ಲೇಖಕಿ ಹಾಗೂ ಅಂಕಣಗಾರ್ತಿಯಾಗಿರುವ ಟ್ವಿಂಕಲ್ ಖನ್ನಾ ರನ್ನು ಆಂಗ್ಲ ಪತ್ರಿಕೆಯೊಂದು ಸಂಪರ್ಕಿಸಿ 2016 ರ ಹಾಸ್ಯಮಯ ಲೇಖನ ಬರೆಯುವಂತೆ ಕೇಳಿದೆ. ಪತ್ರಿಕಗೆ ಹಾಸ್ಯ ಲೇಖನ ಬರೆದ ಖನ್ನಾ ಅದರಲ್ಲಿ ಸಲ್ಮಾನ್ ಖಾನ್ ಕಾಲೆಳೆದಿದ್ದಾರೆ.

ಭಾರತದ ಹಳೆಯ  ಆದರೆ ಯೋಗ್ಯ ಬ್ರಹ್ಮಚಾರಿಗೆ ವಧು ಬೇಕಾಗಿದೆ, ಸಮರ್ಥ, ಮಾಂಸಾಹಾರಿ, ಯಶಸ್ವಿ ಹಾಗೂ ಬಲಿಷ್ಠ ಮಾಂಸ ಖಂಡಗಳ ಖಾಂದಾನ್ ಬಾಯ್, ಅತ್ಯದ್ಬುತ ನೃತ್ಯ ಪ್ರವೀಣ, ನಾಟಕ ಮತ್ತು ಕಲೆಯಲ್ಲಿ ಚತುರ ವರನಿಗೆ, ಪ್ರೆಟಿ, ತೆಳುವಾಗಿರುವ ದೀರ್ಘ ಪ್ರಯಾಣ ಇಷ್ಟ ಪಡುವ, ಹೆಚ್ಚು ಮಾತನಾಡದ, ಯಾವುದೇ ಜಾತಿಯ ವಧು ಬೇಕಾಗಿದೆ , ಆಸಕ್ತಿ ಇರುವವರು Sultan@Bhaijaan.com ಇಲ್ಲಿ ಸಂಪರ್ಕಿಸಿ ಎಂದು ಬರೆದಿದ್ದಾರೆ.

ಇದು ಬಾಯಿಜಾನ್ ಅಭಿಮಾನಿಗಳನ್ನು ಕೆರಳಿಸಿದ್ದು ಟ್ಟಿಟ್ಟರ್ ನಲ್ಲಿ ಟ್ವಿಂಕಲ್ ಖನ್ನಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

SCROLL FOR NEXT