ರಾಮ್ ಗೋಪಾಲ್ ವರ್ಮಾ 
ಬಾಲಿವುಡ್

ಅಮೀರ್ ಖಾನ್ ರ ದಂಗಲ್ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ

ಅಮೀರ್ ಖಾನ್ ನಟನೆಯ ದಂಗಲ್ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾರುಹೋಗಿದ್ದು,

ಮುಂಬೈ: ಅಮೀರ್ ಖಾನ್ ನಟನೆಯ ದಂಗಲ್ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾರುಹೋಗಿದ್ದು, ಅಮೀರ್ ಖಾನ್ ರ ಚಿತ್ರಗಳು ಭಾರತವನ್ನು ಹಿಮ್ಮುಖದಲ್ಲಿ ನಡೆಯುತ್ತಿರುವ ದೇಶವನ್ನಾಗಿ ತೋರಿಸುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಅಮೀರ್ ಖಾನ್ ಅವರ ರಂಗೀಲಾ ಚಿತ್ರದ ನಿರ್ದೇಶಕರಾಗಿದ್ದ ವರ್ಮಾ, ಟ್ವಿಟರ್ ನಲ್ಲಿ ದಂಗಲ್ ಚಿತ್ರವನ್ನು ಹೊಗಳಿದ್ದು, ತೆರೆಯ ಮೇಲೆ ಚಿರ ಯೌವ್ವನಕ್ಕಾಗಿಯೇ ಪ್ರಾಮುಖ್ಯತೆ ನೀಡುವ ಉಳಿದ ಖಾನ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನ ಉಳಿದ ಖಾನ್ ಗಳು ಯುವಕರ ಪಾತ್ರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದರೆ ಅಮೀರ್ ಖಾನ್ ದಂಗಲ್ ಚಿತ್ರದಲ್ಲಿ ಇಬ್ಬರು ಮಕ್ಕಳ ತಂದೆಯ ಪಾತ್ರದಲ್ಲಿ ನಟಿಸುವುದಕ್ಕೂ ಹಿಂಜರಿದಿಲ್ಲ. ಅದ್ಭುತವಾದ ಕತೆಯುಳ್ಳ ಸಿನಿಮಾವನ್ನು ಭಾರತೀಯ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ಅಮೀರ್ ಖಾನ್ ಅವರ ವಿಶ್ವಾಸದ ಬಗ್ಗೆ ನಿಜಕ್ಕೂ ಅಚ್ಚತಿಯಾಗುತ್ತದೆ. ಸೂಪರ್ ಸ್ಟಾರ್ ಗಳು ತೆರೆಯ ಮೇಲೆ ಯುವಕರಾಗಿ ಕಾಣುವ ಸಿಕ್ಸ್ ಪ್ಯಾಕ್ ಗಳ ಹೊರತಾಗಿ ಏನನ್ನೂ ಯೋಚಿಸುವುದಿಲ್ಲ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ. ಅಮೀರ್ ಖಾನ್ ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸಿದ ರೀತಿಯಿಂದ ತಾವು ಆಕರ್ಷಿತರಾಗಿರುವುದಾಗಿ ವರ್ಮಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!