ಬಾಲಿವುಡ್

2016ರ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ 'ದೇಶಿ ಗರ್ಲ್' ಪ್ರಿಯಾಂಕ ಚೋಪ್ರಾ

Lingaraj Badiger
ನವದೆಹಲಿ: ಅಮೆರಿಕದ ಜನಪ್ರಿಯ ಧಾರವಾಹಿ 'ಕ್ವಾಂಟಿಕೊ'ದ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ ಬಾಲಿವುಡ್‌ ನಟಿ 'ದೇಶಿ ಗರ್ಲ್' ಪ್ರಿಯಾಂಕ ಚೋಪ್ರಾ ಅವರು ಇದೀಗ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಲು ರೇಡಿಯಾಗಿದ್ದಾರೆ. 
33 ವರ್ಷದ ಪ್ರಿಯಾಂಕ 2016ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ್ವಿನ್ಸ್ ಜೋನ್ಸ್, ರೀಸೆ ವಿದರ್ ಸ್ಪೂನ್, ಸ್ಟೀವ್ ಕ್ಯಾರೆಲ್, ಜೆ.ಕೆ. ಸಿಮ್ಮೊನ್ಸ್ ಹಾಗೂ ಜರೆಡ್ ಲೆಟೊ ಅವರೊಂದಿಗೆ ಪ್ರಿಯಾಂಕ ಆಸ್ಕರ್ ವೇದಿಕೆ ಅಲಂಕರಿಸಲಿದ್ದಾರೆ.
ಅಕಾಡೆಮಿ ಅವಾರ್ಡ್ ವೆಸ್ ಸೈಟ್ ನಲ್ಲಿ 88ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡುವ ಇತರೆ ಗಣ್ಯರ ಹೆಸರನ್ನು ಪ್ರಕಟಿಸಲಾಗಿದ್ದು, ಫೆಬ್ರವರಿ 28, ಭಾನುವಾರದಂದು ಎಬಿಸಿಯಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನೇರ ಪ್ರಸಾರವಾಗಲಿದೆ ಎಂದು ತಿಳಿಸಿದೆ.
SCROLL FOR NEXT