ನಟ ಶಾರುಖ್ ಅವರ ಮನ್ನತ್ ನಿವಾಸ (ಸಂಗ್ರಹ ಚಿತ್ರ) 
ಬಾಲಿವುಡ್

ಅಕ್ರಮ ರ್ಯಾಂಪ್ ನಿರ್ಮಾಣ: ಶಾರುಖ್ ಖಾನ್ ಗೆ ಭಾರಿ ದಂಡ..!

ಮಹಾನಗರ ಪಾಲಿಕೆಯ ಅನುಮತಿ ಇಲ್ಲದೇ ತಮ್ಮ ಮನೆಯ ಮುಂದೆ ಅಕ್ರಮವಾಗಿ ರ್ಯಾಂಪ್ ನಿರ್ಮಾಣ ಮಾಡಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಖ್ ಖಾನ್ ಗೆ ಮುಂಬೈಮಹಾನಗರ ಪಾಲಿಕೆ ಭಾರಿ ದಂಡವಿಧಿಸಿತ್ತು...

ಮುಂಬೈ: ಮಹಾನಗರ ಪಾಲಿಕೆಯ ಅನುಮತಿ ಇಲ್ಲದೇ ತಮ್ಮ ಮನೆಯ ಮುಂದೆ ಅಕ್ರಮವಾಗಿ ರ್ಯಾಂಪ್ ನಿರ್ಮಾಣ ಮಾಡಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಖ್ ಖಾನ್ ಗೆ ಮುಂಬೈ ಮಹಾನಗರ ಪಾಲಿಕೆ ಭಾರಿ ದಂಡವಿಧಿಸಿತ್ತು.

ನಟ ಶಾರುಖ್ ಖಾನ್ ತಮ್ಮ ಮುಂಬೈ ನಿವಾಸ ಮನ್ನತ್ ನ ಹೊರಗೆ ಕಾನೂನುಬಾಹಿರವಾಗಿ ಅಟ್ಟಣಿಗೆ (ರ್ಯಾಂಪ್) ನಿರ್ಮಿಸಿದ ಕಾರಣ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಶಾರುಖ್‌ರಿಗೆ  1,93,784 ರೂ. ದಂಡ ವಿಧಿಸಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯಿಂದಾಗಿ ಈ ವಿಚಾರ ಬಹಿರಂಗವಾಗಿದ್ದು, ಶಾರುಖ್ ಅವರ ವ್ಯಾನಿಟಿ ವಾಹನವನ್ನು ಮತ್ತು ಅವರ ಕಾರು ನಿಲ್ಲಿಸಲು ಈ  ಜಾಗವನ್ನು ಬಳಸಲಾಗುತ್ತಿತ್ತು. ಶಾರುಖ್ ಖಾನ್ ಅವರ ಈ ನಡೆಯನ್ನು ವಿರೋಧಿಸಿದ್ದ ಕೆಲ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ದರು.

ಹಲವಾರು ಕಾರ್ಯಕರ್ತರು ಮತ್ತು ನಾಗರಿಕರ ದೂರಿನ ಆಧಾರದ ಮೇಲೆ ಮುನಿಸಿಪಲ್ ಆಯುಕ್ತರು ಕ್ರಮ ಕೈಗೊಂಡು 2015ರ ಫೆಬ್ರವರಿ 6 ರಂದು ಶಾರುಖ್‌ಗೆ ನೋಟಿಸ್ ನೀಡಿದ್ದರು. ಶಾರುಖ್ ಸಾರ್ವಜನಿಕ  ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಟ್ಟಿದ ರ್ಯಾಂಪನ್ನು ಬಿಎಂಎಂಸಿ ಕೆಡವಿದ ನಂತರ ಅದರ ವೆಚ್ಚವಾಗಿ 1,93,785 ರು. ಪಾವತಿಸಬೇಕು. ಇಲ್ಲವೇ ಶಿಕ್ಷೆ ಅನುಭವಿಸಬೇಕು ಎಂದು ಅವರಿಗೆ ಬಿಎಂಎಂಸಿ ಮತ್ತೆ  ನೋಟಿಸ್ ನೀಡಿತ್ತು.

ಪಾಲಿಕೆಯ ನೋಟಿಸ್ ದೊರೆತ ಬಳಿಕ ಶಾರುಖ್ ಸದ್ದಿಲ್ಲದೆ ಚೆಕ್ ಮೂಲಕ ಇಡೀ ಮೊತ್ತವನ್ನು ಪಾವತಿಸಿದ್ದರು ಎಂದು ಆರ್ ಟಿಐ ಅರ್ಜಿದಾರ ಅನಿಲ್ ಗಲಗಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Flydubai ಕಾಕ್‌ಪಿಟ್ ದಾಳಿ: ಸಹ ಪೈಲಟ್ ಗುರುತು ಬಹಿರಂಗ

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಪ್ರೇಮಾನಂದ ಮಹಾರಾಜರ ಶಿಷ್ಯ ಆತ್ಮಹತ್ಯೆಗೂ ಮುನ್ನ ಏನಾಯಿತು? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ