ಶಾರೂಖ್ ಖಾನ್ ಗೆ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ್ದಳಂತೆ!
ಅಭೂತ ಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಗೆ ನಿಜ ಜೀವನದಲ್ಲಿ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ್ದರಂತೆ...
ಮುಂಬಯಿ: ಕಿರುತೆರೆಯಿಂದ ಬಂದು ಬಾಲಿವುಡ್ ಹಿರಿತೆರೆಯಲ್ಲಿ ಅಭೂತ ಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಗೆ ನಿಜ ಜೀವನದಲ್ಲಿ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ್ದರಂತೆ.
ತಮ್ಮ ಫ್ಯಾನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಾರೂಖ್ ಖಾನ್ ತಮಗೆ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿದ್ದನ್ನು ಈ ವೇಳೆ ನೆನಪು ಮಾಡಿಕೊಂಡರು.
ತಮ್ಮ ಭವಿಷ್ಯವನ್ನು ಅರಸುತ್ತಾ ಮೊಟ್ಟ ಮೊದಲ ಬಾರಿಗೆ ಮುಂಬಯಿಗೆ ರೈಲಿನಲ್ಲಿ ಬರುತ್ತಿದೆ. ರೈಲು ಮುಂಬಯಿ ತಲುಪಿದ ನಂತರ ಮತ್ತೆ ಸ್ಥಳೀಯ ಮಾರ್ಗಗಳಲ್ಲಿ ಸಂಚರಿಸುತ್ತೆ ಎಂದು ನನಗೆ ತಿಳಿದಿರಲಿಲ್ಲ. ನಾನು ಕುಳಿತಿದ್ದ ಬರ್ತ್ ನಲ್ಲಿ ಬೇರೆಯವರು ಕುಳಿತು ಕೊಳ್ಳಲು ನಾನು ಅವಕಾಶ ನೀಡಲಿಲ್ಲ. ಇದು ನನ್ನ ಬರ್ತ್ ಎಂದು ಹೇಳಿದೆ.
ನನ್ನ ಬರ್ತ್ ನಲ್ಲಿ ನೀವು ಕುಳಿತುಕೊಳ್ಳಬಹುದು, ಆದರೆ ನಿಮ್ಮ ಜೊತೆಯಿರುವ ಪುರುಷ ಕುಳಿತುಕೊಳ್ಳಲು ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಕೂಡಲೇ ನನ್ನ ಕೆನ್ನೆಗೆ ಹೊಡೆದ ಮಹಿಳೆ. ಇದು ನಿನ್ನದಲ್ಲ. ಇದು ಎಲ್ಲರದ್ದು ಎಂದು ಹೇಳಿ ಕುಳಿತು ಕೊಂಡರು ಎಂದು ಶಾರೂಖ್ ಖಾನ್ ಅಂದಿನ ಘಟನೆಯ ಬಗ್ಗೆ ಮೆಲುಕು ಹಾಕಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.