ನವದೆಹಲಿ: ದಾಳಿಯ ಬಳಿಕ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವ ಸಲುವಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತಮ್ಮ ಸಾಮಾಜಿಕ ತಾಣಗಳ ಪ್ರೊಫೈಲ್ ಫೋಟೋವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿಕೊಂಡಿದ್ದಾರೆ.
ಏತನ್ಮಧ್ಯೆ, ಹುತಾತ್ಮ ಯೋಧ ಗುರುಸೇವಕ್ ಸಿಂಗ್ ನೆನಪಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಹೂಗೂ ಅವರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸುವುದಾಗಿ ಹರ್ಯಾಣ ಸರ್ಕಾರ ಘೋಷಿಸಿದೆ.
ಈ ನಡುವೆ, ದೆಹಲಿಯಲ್ಲಿ ಉಗ್ರರ ದಾಳಿ ಭೀತಿ ಹೆಚ್ಚಿರುವ ಕಾರಣ ಗಣರಾಜ್ಯೋತ್ಸವ ದಿನದವರೆಗೆ ಹೈ ಅಲರ್ಟ್ ಘೋಷಿಸಲಾಗಿದೆ.