ದೀಪಿಕಾ ಪಡುಕೋಣೆ - ರಣವೀರ್ ಸಿಂಗ್
ಮುಂಬೈ: ಬಾಲಿವುಡ್ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಬೆಸ್ಟ್ ಫ್ರೆಂಡ್ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಮುಂಬೈ ಮಿರರ್ ವರದಿ ಪ್ರಕಾರ, ಕೆಲವೇ ತಿಂಗಳುಗಳ ಹಿಂದೆ ರಣವೀರ್ ಸಿಂಗ್ ಹಾಗೂ ಪಡುಕೋಣೆ ಕುಟುಂಬ ಸದಸ್ಯರು ಭೇಟಿ ಮಾಡಿದ್ದು, ಮದುವೆ ಕುರಿತಾಗಿಯೇ ರ್ಚಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಪರಸ್ಪರ ರಿಂಗ್ ಬದಲಿಸಿಕೊಳ್ಳುವ ಮೂಲಕ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರಣವೀರ್ ಮತ್ತು ದೀಪಿಕಾ ಮನೆಯವರು ಈ ಇಬ್ಬರ ಮದುವೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರಂತೆ. ಆದರೆ ಈಗಲೇ ಮದುವೆಯಾಗಲಿ ಒಪ್ಪದ ದೀಪಿಕಾ, ಅಧಿಕೃತವಾಗಿ ರಣವೀರ್ ನನ್ನು ಮದುವೆಯಾಗಲು ಎರಡು ವರ್ಷಗಳ ಸಮಯ ಕೇಳಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವು ಮೂಲಗಳ ಪ್ರಕಾರ ನಿಶ್ಚಿತಾರ್ಥ ನಡೆದದ್ದು ನಿಜ ಎಂದೇ ಹೇಳಲಾಗುತ್ತಿದೆ. ಆದರೆ ರಣವೀರ್ ಆಗಲಿ, ದೀಪಿಕಾ ಆಗಲಿ ಈಬಗ್ಗೆ ಇನ್ನೂ ತುಟಿ ಪಿಟಿಕ್ ಅಂದಿಲ್ಲ. ಎಲ್ಲಿಯೂ ಗುಟ್ಟು ರಟ್ಟು ಮಾಡುತ್ತಿಲ್ಲ. ಆದರೆ ಸುದ್ದಿ ಸುಳ್ಳಲ್ಲ ಎನ್ನುವ ರೀತಿ ಈ ಜೋಡಿ ಪ್ರಣಯ ಹಕ್ಕಿಗಳಂತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಬಾಲಿವುಡ್ ಮಂದಿಯ ಹೇಳಿಕೆ. ಅಷ್ಟೇ ಏಕೆ, ಇನ್ನೊಂದು ವಿಷಯ ಏನಂದ್ರೆ ಇಬ್ಬರೂ ಪರಸ್ಪರ ತುಂಬಾನೇ ರಕ್ಷಣೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics