ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್
ಮುಂಬೈ: ತಮ್ಮ ತಾಯಿಯ ಜೊತೆಗೆ ಈದ್ ಸಂಭ್ರಮದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ಭಯೋತ್ಪಾದನೆಯನ್ನು ಹರಡುವವರಿಗೆ, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ, ಧರ್ಮದ ಜೊತೆ ಸಂಬಂಧ ಇಲ್ಲ ಎಂದು ಗುರುವಾರ ಹೇಳಿದ್ದಾರೆ.
ವಿಶ್ವದಾದ್ಯಂತ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವವರ ಬಗ್ಗೆ ಮತ್ತು ಅದಕ್ಕೆ ಧರ್ಮದ ಬಣ್ಣ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ " ಭಯೋತ್ಪಾದನೆಯನ್ನು ಹರಡುವವರಿಗೆ, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ, ಧರ್ಮ ಜೊತೆಗೆ ಸಂಬಂಧವಿರುವುದಿಲ್ಲ ಎಂದು ನಾನು ನಂಬುತ್ತೇನೆ. ಅವನು ಮುಸ್ಲಿಮನಾಗಿರಲಿ ಹಿಂದೂ, ಸಿಖ್, ಕ್ರಿಶ್ಚಿಯನ್ ಆಗಿರಲಿ..." ಎಂದಿದ್ದಾರೆ ನಟ.
"ಧರ್ಮಕ್ಕಾಗಿ ಇದನ್ನು ಮಾಡುತ್ತಿದ್ದೇವೆ ಎಂದು ಅವರು ಎಷ್ಟೇ ಹೇಳಿದರು, ಅವರಿಗೆ ಧರ್ಮದ ಜೊತೆಗೆ ಸಂಬಂಧವಿಲ್ಲ ಏಕೆಂದರೆ ಅವರು ಧರ್ಮವನ್ನು ಸರಿಯಾಗಿ ಅನುಸರಿಸಿದ್ದರೆ ಅದು ನಮಗೆ ಪ್ರೀತಿಯನ್ನು ಬೋಧಿಸುತ್ತದೆ" ಎಂದು ಕೂಡ ಅಮೀರ್ ಹೇಳಿದ್ದಾರೆ.
ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಕ್ ಅವರನ್ನು ನಿಷೇಧಿಸಬೇಕೇ ಎಂಬ ಪ್ರಶ್ನೆಗೆ "ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಹೇಳಬೇಕಾಗಿದ್ದನ್ನು ಹೇಳಿದ್ದೇನೆ" ಎಂದಿದ್ದಾರೆ.
ಈದ್ ಹೇಗೆ ಸಂಭ್ರಮಿಸಿದಿರಿ ಎಂಬ ಪ್ರಶ್ನೆಗೆ "ಈದ್ ದಿನವಾದ ಇಂದು ನನ್ನ ಕುಟುಂಬದ ಜೊತೆಗೆ ಸಮಯ ಕಳೆದೆ. ನಾನು ಸಣ್ಣವನಿದ್ದಾಗ ಈದಿ (ಹಣದ ಉಡುಗೊರೆ) ಮೇಲೆ ಹೆಚ್ಚು ಗಮನ ಇತ್ತು" ಎಂದಿದ್ದಾರೆ.
"ಕಿರಣ್ ಮತ್ತು ಆಜಾದ್ ಇಲ್ಲಿಲ್ಲ. ಅವರು ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ನಾನು ಅಜಾದ್ ಗೆ 2 ರು ಈದಿ ನೀಡುತ್ತೇನೆ. ಹೆಚ್ಚು ಹಣ ನೀಡಿ ಅವರನ್ನು ಕೆಟ್ಟದಾರಿಗೆ ತಳ್ಳಬಾರದು ನೋಡಿ" ಎಂದಿದ್ದಾರೆ ಅಮೀರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics