ಅನುಷ್ಕಾ ಶರ್ಮಾ 
ಬಾಲಿವುಡ್

ಸಾಮಾಜಿಕ ಮಾಧ್ಯಮಗಳು ರಾಕ್ಷಸರಂತೆ ವರ್ತಿಸುತ್ತವೆ: ಅನುಷ್ಕಾ ಆಕ್ರೋಶ

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ ಕೊಹ್ಲಿ ವಿಚಾರವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಹಲವು ಬಾರಿ ಸಾಮಾಜಿಕ ಮಾಧ್ಯಮಗಳಿಗೆ...

ನವದೆಹಲಿ: ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ ಕೊಹ್ಲಿ ವಿಚಾರವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಹಲವು ಬಾರಿ ಸಾಮಾಜಿಕ ಮಾಧ್ಯಮಗಳಿಗೆ ಆಹಾರವಾಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ತಮ್ಮನ್ನು ನಿಂದಿಸಿದ್ದಕ್ಕೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ, ಸಾಮಾಜಿಕ ಮಾಧ್ಯಮಗಳು ರಾಕ್ಷಸರಂತೆ ವರ್ತಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನನ್ನ ಹಾಗೂ ವಿರಾಟ್ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳು ರಾಕ್ಷಸರಂತೆ ವರ್ತಿಸಿದ್ದವು. ಆದರೆ ಇದರಿಂದ ನನಗೇನು ನಷ್ಟವಾಗಿಲ್ಲ ಮತ್ತು ನಾನು ಆ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ವಿಶ್ವಕಪ್ ಸೆಮಿಫೈನಲ್​ನಲ್ಲಿ ವಿರಾಟ್ ಕಳಪೆ ಪ್ರದರ್ಶನ ನೀಡಿ, ಭಾರತ ಸೋತಾಗ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಹಾಸ್ಯ ಹಾಗೂ ಬೈಗುಳಗಳು ವ್ಯಕ್ತವಾದವು. ಆದರೆ ನಾನು ಇದಕ್ಕೆಲ್ಲ ತಲೆಕಡಿಸಿಕೊಂಡಿಲ್ಲ. ನೀವು ನಿಜವಾಗಿಯು ದೇಶ ಪ್ರೇಮ ಹೊಂದಿರುವುದೇ ಆದರೆ ಒಂದು ಘಟನೆಯನ್ನು ಪಾರದರ್ಶಕವಾಗಿ ನೋಡಿ ಮಾತನಾಡಿ. ಯಾವುದೇ ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!