ಊರ್ಮಿಳಾ ಮಾತೋಂಡ್ಕರ್-ಮೊಹ್ಸಿನ್ ಅಖ್ತರ್ ಮೀರ್ 
ಬಾಲಿವುಡ್

ಕಾಶ್ಮೀರಿ ಉದ್ಯಮಿಯೊಂದಿಗೆ "ರಂಗೀಲಾ" ಬೆಡಗಿ ಊರ್ಮಿಳಾ ವಿವಾಹ

ಬಾಲಿವುಡ್ ಸೈಲೆಂಟ್ ಮದುವೆ ಸರಣಿಗೆ ಇದೀಗ ಮತ್ತೊಂದು ಜೋಡಿ ಸೇರ್ಪಡೆಯಾಗಿದ್ದು, ರಂಗೀಲಾ ಬೆಡಗಿ ಎಂದೇ ಖ್ಯಾತರಾಗಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಸದ್ದಿಲ್ಲದೇ ಮುಂಬೈನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ...

ಮುಂಬೈ: ಬಾಲಿವುಡ್ ಸೈಲೆಂಟ್ ಮದುವೆ ಸರಣಿಗೆ ಇದೀಗ ಮತ್ತೊಂದು ಜೋಡಿ ಸೇರ್ಪಡೆಯಾಗಿದ್ದು, ರಂಗೀಲಾ ಬೆಡಗಿ ಎಂದೇ ಖ್ಯಾತರಾಗಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು  ಸದ್ದಿಲ್ಲದೇ ಮುಂಬೈನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಕಾಶ್ಮೀರಿ ಮೂಲದ ಉದ್ಯಮಿ ಮತ್ತು ಮಾಡೆಲ್ ಮೊಹ್ಸಿನ್ ಅಖ್ತರ್ ಮೀರ್ ಜೊತೆ ಊರ್ಮಿಳಾ ಮಾತೋಂಡ್ಕರ್ ಮದುವೆಯಾಗಿದ್ದು, ಮುಂಬೈ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ  ಮಾಡಿ ಮುಗಿಸಲಾಗಿದೆ. ಮದುವೆಗೆ ಊರ್ಮಿಳಾ ಆಪ್ತ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಅವರನ್ನು ಬಿಟ್ಟರೆ ಬೇರೆ ಯಾವುದೇ ಬಾಲಿವುಡ್ ನಟರು ಮದುವೆಯಲ್ಲಿ  ಭಾಗಿಯಾಗಿರಲಿಲ್ಲ ಎಂದು ತಿಳಿದುಬಂದಿದೆ.

ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದೇವೆ. ಮನೆಯವರ ನಿರ್ಧಾರದಂತೆ ಸಿಂಪಲ್ ಆಗಿ ವಿವಾಹ ಬಂಧನಕ್ಕೊಳಗಾಗಿದ್ದೇವೆ. ಹೊಸ ಜೀವನ ಶುರುಮಾಡುತ್ತಿರುವ  ನಮಗೆ ನಿಮ್ಮ ಆಶೀರ್ವಾದ ಬೇಕೆಂದು ಊರ್ಮಿಳಾ ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಊರ್ಮಿಳಾ ಅವರು ರಂಗೀಲಾ ಹಾಡಿನ ಮೂಲಕ ರಂಗೀಲಾ ಬೆಡಗಿ ಎಂದು ಖ್ಯಾತರಾಗಿದ್ದರು. ಸತ್ಯ, ರಂಗೀಲ, ಜುದಾಯಿ, ದೌಡ್ ಹಾಗೂ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯ ಬಾರಿಗೆ 2014ರಲ್ಲಿ ಅಜೋಬಾ ಎಂಬ ಮರಾಠಿ ಚಿತ್ರದಲ್ಲಿ ನಟಿಸಿದ್ದ ಊರ್ಮಿಳ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು.

ಇನ್ನು ತಮ್ಮ ಮಾಜಿ ಗೆಳತಿ ಊರ್ಮಿಳಾ ಮದುವೆ ಸುದ್ದಿ ತಿಳಿದ ಬಳಿಕ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ಅವರು, ಊರ್ಮಿಳ ಅತ್ಯಂತ ಸುಂದರ ಹಾಗೂ ಪ್ರತಿಭಾನ್ವಿತ ನಟಿ, ಅವಳ ಜೀವನ' ರಂಗೀಲ ಮಯವಾಗಿರಲಿ ಎಂದು ಹರಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಧಿಕೃತ ಪಟ್ಟಿಗೆ ರಾಜ್ಯಪಾಲರಿಂದ ಸಹಿ; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಖಾಲಿ ನಿವೇಶನಗಳ ಸ್ವಚ್ಛಗೊಳಿಸುವ ಗಡುವು: ಮಾಲಿಕರಿಗೆ ಗುಡ್ ನ್ಯೂಸ್!

ಉಪ ಸಭಾಪತಿ ನೇಮಕದಲ್ಲಿ ಬಿಗ್ ಟ್ವೀಸ್ಟ್: ಅಸಮಾಧಾನ ತಣಿಸಲು ಮಂಕಾಳ ವೈದ್ಯಗೆ ಮಣೆ; ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಪೊನ್ನಣ್ಣ ನೇಮಕ

'ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ': ‘ಟಾಕ್ಸಿಕ್’ ಟ್ರೇಲರ್ ಕುರಿತು Rishika Singh ಆಕ್ರೋಶ, ಯಶ್ ಅಭಿಮಾನಿಗಳ ಅಸಮಾಧಾನ! Video

ಅಮಿತ್ ಶಾ 'ಉಪನ್ಯಾಸ' ಕೇಳುವ ಆಸಕ್ತಿ ಈಗ ನಮ್ಮಲ್ಲಿ ಉಳಿದಿಲ್ಲ; ಅವರ ವರ್ಚಸ್ಸಿನ 'ಬಲೂನ್' ಟುಸ್ ಆಗಿದೆ: ರಾಹುಲ್ ಗಾಂಧಿ