ಮುಂಬಯಿ: ನಟ ಸಲ್ಮಾನ್ ಖಾನ್ ತನ್ನ ಸ್ನೇಹಿತರಿಗೆ ಹಾಗೂ ಆಪ್ತರಿಗೆ ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತಲೇ ಇರುತ್ತಾರೆ. ತಮ್ಮ ಪ್ರೇಯಸಿ ಲುಲಿಯಾ ವಂಟೂರ್ ನಂತರ ಸಲ್ಲು ಮತ್ತೊಬ್ಬ ನಟಿಗೆ ಐಷಾರಾಮಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮೂಲಗಳ ಪ್ರಕಾರ 'ಜೈ ಹೋ' ಚಿತ್ರದಲ್ಲಿ ಸಲ್ಮಾನ್ ಜೊತೆ ಅಭಿನಯಿಸಿದ ನಟಿ ಡೈಸಿ ಷಾ, ಈ ಒಂದು ಉಡುಗೊರೆಯನ್ನ ಪಡೆದುಕೊಂಡಿದ್ದಾಳಂತೆ. ಈ ಹಿಂದೆ ಸಲ್ಮಾನ್ ಕತ್ರಿನಾ ಕೈಫ್ಗೂ ಒಂದು ಕಾರನ್ನ ಗಿಫ್ಟ್ ನೀಡಿದ್ರು, ಆದ್ರೆ ಅವರಿಬ್ಬರ ಬ್ರೇಕಪ್ ನಂತರ ಕ್ಯಾಟ್ ಆ ಕಾರನ್ನು ಮಾರಿ ಬಿಟ್ಟಳಂತೆ.
ಸಲ್ಲು ನಟಿಮಣಿಯರಿಗಷ್ಟೇ ಅಲ್ಲ ಬಾಲಿವುಡ್ನಲ್ಲಿ ತನ್ನ ಆಪ್ತರಾದ ಸಂಜಯ್ ದತ್, ಶಾರೂಖ್ ಹಾಗೂ ಸುನೀಲ್ ಶೆಟ್ಟಿಗೂ ಕಾಸ್ಟ್ಲಿ ಉಡುಗೊರೆಗಳನ್ನ ನೀಡಿದ್ದಾರೆ.