ಶಾಹಿದ್ ಅಫ್ರೀದಿ - ಫವಾದ್ ಖಾನ್ 
ಬಾಲಿವುಡ್

ಪಾಕ್ ಗಿಂತ ಭಾರತದಲ್ಲಿ ಹೆಚ್ಚು ಪ್ರೀತಿ ಸಿಕ್ಕಿದೆ: ಅಫ್ರೀದಿ ಬೆಂಬಲಿಸಿದ ನಟ ಫವಾದ್ ಖಾನ್

ಅಫ್ರೀದಿಗೆ ಏನು ಅನುಭವವಾಗಿದೆಯೋ ಅದೇ ರೀತಿ ನನಗೂ ಹಲವಾರು ಕಡೆ, ಬಹುತೇಕ ಎಲ್ಲ ಕಡೆಯಲ್ಲೂ ಆಗಿದೆ. ಆತ ಹೇಳಿದ್ದರಲ್ಲಿ ತಪ್ಪೇನಿದೆ?.

ನವದೆಹಲಿ: ಪಾಕಿಸ್ತಾನದ ಕ್ರಿಕೆಟರಿಗೆ ತಾಯ್ನಾಡಿನಲ್ಲಿ ಸಿಗುವುದಕ್ಕಿಂತ ಹೆಚ್ಚು ಪ್ರೀತಿ ಭಾರತದಲ್ಲಿ ಸಿಕ್ಕಿದೆ ಎಂದು ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ ಅವರ ಹೇಳಿಕೆಗೆ ಪಾಕ್ ಮೂಲದ ಬಾಲಿವುಡ್ ನಟ ಫವಾದ್ ಖಾನ್ ಬೆಂಬಲ ಸೂಚಿಸಿದ್ದಾರೆ.
ಬಾಲಿವುಡ್‌ನಲ್ಲಿ ಶೀಘ್ರವೇ ತೆರೆ ಕಾಣಲಿರುವ ಕಪೂರ್ ಆ್ಯಂಡ್ ಸನ್ಸ್ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ ಫವಾದ್ ಖಾನ್, ಅಫ್ರೀದಿಗೆ ಏನು ಅನುಭವವಾಗಿದೆಯೋ ಅದೇ ರೀತಿ ನನಗೂ ಹಲವಾರು ಕಡೆ, ಬಹುತೇಕ ಎಲ್ಲ ಕಡೆಯಲ್ಲೂ ಆಗಿದೆ. ಆತ ಹೇಳಿದ್ದರಲ್ಲಿ ತಪ್ಪೇನಿದೆ?. ಪಾಕಿಸ್ತಾನದಲ್ಲಿ ನಮಗೆ ಲಭಿಸಿದ ಪ್ರೀತಿಗಿಂತ ಹೆಚ್ಚು ಪ್ರೀತಿಯನ್ನು ಭಾರತದ ಅಭಿಮಾನಿಗಳು ನಮಗೆ ನೀಡಿದ್ದಾರೆ.
ಆತ ಹೇಳಿದ್ದನ್ನು ಯಾರೂ ತಪ್ಪಾಗಿ ಅರ್ಥೈಸಬೇಕಾಗಿಲ್ಲ. ಈ ಎಲ್ಲ ವಿವಾದಗಳು ಕಾಲದೊಂದಿಗೆ ತಣ್ಣಗಾಗುತ್ತವೆ. ಆತ ಹಾಗೆ ಹೇಳಿದ್ದರಿಂದ ಆತನ ದೇಶಪ್ರೇಮವನ್ನು ಪ್ರಶ್ನಿಸಬೇಕಾಗಿಲ್ಲ. ಆತ ಪಾಕಿಸ್ತಾನವನ್ನು ಗೌರವಿಸುತ್ತಾನೆ. ಆತ ಪಾಕಿಸ್ತಾನವನ್ನು ಪ್ರತಿನಿಧೀಕರಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಫವಾದ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT