ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಇತಿಹಾಸ ನೆನಪಿಸುವ ವಿಕ್ರಾಂತ್ -15 ಬೈಕ್ ಖರೀದಿಸಿದ ಆಮೀರ್ ಖಾನ್

ಬಾಲಿವುಡ್​ನ ಜನಪ್ರಿಯ ನಟ, ನಿರ್ದೇಶಕ ಆಮಿರ್ ಖಾನ್ ಈಗ ‘ಬಜಾಜ್ ನ ಹೊಸ ಉತ್ಪನ್ನವಾದ ವಿ’ ಬೈಕ್​ ಖರೀದಿಸಿದ್ದಾರೆ...

ಹೊಸ ಬೈಕ್ ನೊಂದಿಗೆ ಆಮೀರ್
Shilpa D
Updated On : 3 May 2016, 3:04 am

ಮುಂಬೈ: ಬಾಲಿವುಡ್​ನ ಜನಪ್ರಿಯ ನಟ, ನಿರ್ದೇಶಕ ಆಮಿರ್ ಖಾನ್ ಈಗ ‘ಬಜಾಜ್ ನ ಹೊಸ ಉತ್ಪನ್ನವಾದ ವಿ’ ಬೈಕ್​ ಖರೀದಿಸಿದ್ದಾರೆ.

1971ರ ಭಾರತ -ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಐಎನ್​ಎಸ್ ವಿಕ್ರಾಂತ್​ನಿಂದ ಸ್ಪೂರ್ತಿ ಪಡೆದುಕೊಂಡಿರುವ ಆಮಿರ್ ಖಾನ್, ಆ ನೆನಪಿಗಾಗಿ ಬಜಾಜ್ ವಿ15 ಬೈಕ್ ಖರೀದಿಸಿದ್ದಾರೆ.  ವಿ-15 ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, 150ಸಿಸಿ ಸಾಮರ್ಥ್ಯದ ಬೈಕ್ ಆಗಿದೆ.

ಆಮಿರ್​ಗೆ ಆಪ್ತರಾಗಿರುವ ರಾಜೀವ್ ಬಜಾಜ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಬಜಾಜ್ ವಿ15 ಕುರಿತು ಎಲ್ಲಾ ಮಾಹಿತಿ ಪಡೆದುಕೊಂಡ ಬಳಿಕ ಖರೀದಿಗೆ ಮುಂದಾದರು ಎಂದಿದ್ದಾರೆ.

ಬಜಾಜ್ ನಿರ್ಮಾಣದ ‘ವಿ’ ಸರಣಿಯ ಮೊದಲ ಬೈಕ್ ಖರೀದಿಸಿರುವ ಆಮಿರ್ ಖಾನ್ ತಮಗೆ ಅಗತ್ಯವೆನಿಸಿದ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ‘ಎ’ ಎಂದು ಉಬ್ಬು ಅಕ್ಷರ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

‘ವಿ’ ಬೈಕ್ ವಿಶೇಷವಾದದ್ದು. ಇದನ್ನು ಬೇರಿನ್ನಾವುದೇ ಬೈಕ್​ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇತಿಹಾಸ ನೆನಪಿಸುವಂಥ ವಿಶೇಷತೆ ಇರುವ ಬೈಕ್ ಇದಾಗಿದೆ ಎಂದು ಆಮೀರ್ ಖಾನ್ ಹೇಳಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement