ಕರಾಚಿ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ಭಾಗೀ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿವೆ.
ಹೌದು ಕಳೆದ ವಾರ ತೆರೆಗೆ ಬಂದ ಭಾಗೀ ಚಿತ್ರ ಮೊದಲ ದಿನ ಭರ್ಜರಿ 11.87 ಕೋಟಿ ರುಪಾಯಿ ಗಳಿಕೆ ಮಾಡಿದೆ. ಇದರದೊಂದಿಗೆ ಶ್ರದ್ಧಾ ಕಪೂರ್ ಅಭಿನಯದ ಮೂರು ಚಿತ್ರಗಳು ಮೊದಲ ದಿನದ ಕಲೆಕ್ಷನ್ ಎರಡಂಕಿ ದಾಟಿವೆ.
ಶ್ರದ್ಧಾ ಅಭಿನಯದ ಮೊದಲ ಚಿತ್ರ ಏಕ್ ವಿಲನ್ ಮೊದಲ ದಿನ 16.72 ಕೋಟಿ, ಎಬಿಸಿಡಿ-2 ಚಿತ್ರ 14.3 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹ್ಯಾಟ್ರಿಕ್ ಹೊಡೆದಿದ್ದಾರೆ.
ಇನ್ನು ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಓಕೆ ಕಣ್ಮಣಿ ಚಿತ್ರದ ಹಿಂದಿ ರೀಮೆಕ್ ನಲ್ಲಿ ಆದಿತ್ಯ ರಾಯ್ ಕಪೂರ್ ಜತೆ ಶ್ರದ್ಧಾ ನಟಿಸುತ್ತಿದ್ದು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಲಿದೆಯೇ ಕಾದು ನೋಡಬೇಕು.