ನವದೆಹಲಿ: ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಬಾಲಿವುಡ್ ನಟಿ ಕಂಗನಾ ರಣಾವತ್, ತಾವು ನಟಿಸುವ ಸಿನೆಮಾಗಳಲ್ಲಿ ತಮ್ಮದೇ ಪ್ರಧಾನ ಪಾತ್ರ ಎಂಬ ನಿಲುವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇರ್ಫಾನ್ ಖಾನ್ ಜೊತೆಗೆ 'ಡಿವೈನ್ ಲವರ್ಸ್' ಎಂಬ ಸಿನೆಮಾದಲ್ಲಿ ಅವರು ನಟಿಸಬೇಕಿತ್ತು ಆದರೆ ಕೊನೆಯ ಕ್ಷಣದಲ್ಲಿ ಹೊರಬಿದ್ದು ಆ ಪಾತ್ರಕ್ಕೆ ಜರೀನ್ ಆಯ್ಕೆಯಾಗಿದ್ದರು.
ಆದರೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಉದಾಹರಣೆಯಾಗಿ ೨೯ ವರ್ಷದ ನಟಿಯ ಜೊತೆಗೆ ನಟಿಸುವ ಸಂದರ್ಭದ ಬಗ್ಗೆ ಮಾತನಾಡಿರುವ ನಟ ಇರ್ಫಾನ್ ಖಾನ್ "ಡಿವೈನ್ ಲವರ್ ಪಾತ್ರದಲ್ಲಿ ನಟಿಸುತ್ತೇನೋ ಇಲ್ಲವೋ ನನಗೆ ಮಾತ್ರ ತಿಳಿದಿದೆ, ಸಿನೆಮಾ ಎಂದಿನಂತೆ ಗೊಂದಲದ ಸ್ಥಿತಿಯಲ್ಲೇ ಇದೆ" ಎಂದಿದ್ದಾರೆ.
"ಮತ್ತು ಈಗ ಕಂಗನಾ ರಣಾವತ್ ಈಗ ಕೈಗೇ ಸಿಗುತ್ತಿಲ್ಲ. ಅವರ ವಿರುದ್ಧ ಹೀರೋಯಿನ್ ಆಗಿ ನಟಿಸಬೇಕಾಗಿ ಬಂದರೆ ನಾನು ಅದಕ್ಕೂ ಸಿದ್ಧ. ಅವರು ಹೀರೋ ಆಗಿ ನಾನು ನಾಯಕಿಯಾಗಿ ನಟಿಸಲು ಅವಕಾಶ ಇರುವ ಯಾವುದಾದರೂ ಸ್ಕ್ರಿಪ್ಟ್ ಇದ್ದರೆ ನಾನು ಖಂಡಿತಾ ತೆಗೆದುಕೊಳ್ಳುತ್ತೇನೆ" ಎಂದು ಕೂಡ ಇರ್ಫಾನ್ ಹೇಳಿದ್ದಾರೆ.
ಸದ್ಯಕ್ಕೆ ರಾನ್ ಹೊವಾರ್ಡ್ ನಿರ್ದೇಶನದ ಹಾಲಿವುಡ್ ಚಿತ್ರ 'ಇನ್ಫರ್ನೋ'ದಲ್ಲಿ ಇರ್ಫಾನ್, ಟಾಮ್ ಹ್ಯಾಂಕ್ಸ್ ಜೊತೆಗೆ ನಟಿಸಿದ್ದಾರೆ.