ಆರ್ ಜೆ ಅನ್ಮೋಲ್ ರನ್ನು ಮದುವೆಯಾದ ಅಮ್ರಿತಾ ರಾವ್
ವಿವಾಹ ಚಿತ್ರದ ಮುದ್ದು ಮುಖದ ನಾಯಕಿ ಅಮ್ರಿತಾ ರಾವ್ ಭಾನುವಾರ ರೇಡಿಯೋ ಜಾಕಿ ಅನ್ಮೋಲ್...
ಮುಂಬೈ: ಹಿಂದಿಯ ವಿವಾಹ ಚಿತ್ರದ ಮುದ್ದು ಮುಖದ ನಾಯಕಿ ಅಮ್ರಿತಾ ರಾವ್ ಭಾನುವಾರ ರೇಡಿಯೋ ಜಾಕಿ ಅನ್ಮೋಲ್ ಅವರನ್ನು ಮದುವೆಯಾಗಿದ್ದಾರೆ.
ಸ್ವತಃ ಅನ್ಮೋಲ್ ಅವರೇ ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ಪುಟದಲ್ಲಿ ವಿಷಯ ಖಚಿತಪಡಿಸಿದ್ದಾರೆ.
'' ಏಳು ವರ್ಷಗಳ ಹಿಂದೆ ಆರಂಭವಾದ ಸಂದರ್ಶನ ಮುಂದುವರಿಯುತ್ತಿದೆ, ಅದು ಇಂದು ಮತ್ತಷ್ಟು ಗಟ್ಟಿಯಾಗಿದೆ! ಈಗಷ್ಟೇ ಮದುವೆಯಾಗಿದ್ದೇವೆ, ನನಗೆ ಮತ್ತು ಅಮ್ರಿತಾಗೆ ನಿಮ್ಮ ಶುಭ ಹಾರೈಕೆಗಳು ಬೇಕು'' ಎಂದು ಅನ್ಮೋಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅಮ್ರಿತಾ ಅವರು ಪ್ರಸ್ತುತ ಟಿವಿ ಶೋ ''ಮೇರಿ ಆವಾಜ್ ಹೈ ಪೆಹಚಾನ್ ಹೈ'' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮ್ರಿತಾ ಇಶ್ಕ್ ವಿಶ್ಕ್, ಜಾಲಿ ಎಲ್ ಎಲ್ ಬಿ, ದೀವಾರ್, ಮೈ ಹೂ ನಾ ಮತ್ತು ದ ಲೆಜೆಂಡ್ ಆಫ್ ಭಗತ್ ಸಿಂಗ್ ನಲ್ಲಿ ಅಭಿನಯಿಸಿದ್ದಾರೆ. ಈ ಜೋಡಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.