ಆರ್ಜಿವಿ ಅವರ 'ವೀರಪ್ಪನ್' ಡೈಲಾಗ್ಗೆ ಸೆನ್ಸಾರ್ ಕಟ್
ರಾಮ್ಗೋಪಾಲ್ ವರ್ಮಾ ಅವರ ನೂತನ ಹಿಂದಿ ಚಲನಚಿತ್ರ ವೀರಪ್ಪನ್ಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿದೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ...
ನವದೆಹಲಿ: ರಾಮ್ಗೋಪಾಲ್ ವರ್ಮಾ ಅವರ ನೂತನ ಹಿಂದಿ ಚಲನಚಿತ್ರ 'ವೀರಪ್ಪನ್'ಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿದೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ವರ್ಮಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಸಂಭಾಷಣೆಯೊಂದಕ್ಕೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಒತ್ತಾಯಿಸಿದೆ ಎಂದಿದ್ದಾರೆ.
ಪ್ರಸ್ತುತ ಚಿತ್ರಕ್ಕೆ ಸೆನ್ಸಾರ್ ಎ ಸರ್ಟಿಫಿಕೇಟ್ ನೀಡಿದೆ.
ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದು ಎಲ್ಟಿಟಿಇ ನೇತಾರ ವೇಲುಪ್ಪಿಳ್ಳ ಪ್ರಭಾಕರ್ ಎಂದು ವೀರಪ್ಪನ್ ಪಾತ್ರಧಾರಿಯಾದ ಸಂದೀಪ್ ಭಾರದ್ವಾಜ್ ಹೇಳುವ ಸಂಭಾಷಣೆಗೆ ಕತ್ತರಿ ಹಾಕುವಂತೆ ಸೆನ್ಸಾರ್ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.