ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಅಜಯ್‌ ದೇವ್‌ಗನ್‌ಗೆ ಸಂಕಷ್ಟ: 'ಶಿವಾಯ್‌' ಪೋಸ್ಟರ್‌ ವಿರುದ್ದ ದೂರು

ನಟ ಅಜಯ್‌ ದೇವ್‌ಗನ್‌ ನಟಿಸಿರುವ ಶಿವಾಯ್ ಚಿತ್ರದ ಪೋಸ್ಟರ್ ಈಗ ವಿವಾದಕ್ಕೆ ಕಾರಣವಾಗಿದ್ದು, ಅಜಯ್ ದೇವಗನ್ ವಿರುದ್ಧ ದೂರು ದಾಖಲಾಗಿದೆ...

ಶಿವಾಯ್ ಚಿತ್ರದ ಪೋಸ್ಟರ್
Shilpa D
Updated On : 26 May 2016, 1:05 am

ನವದೆಹಲಿ: ನಟ ಅಜಯ್‌ ದೇವ್‌ಗನ್‌ ನಟಿಸಿರುವ ಶಿವಾಯ್ ಚಿತ್ರದ ಪೋಸ್ಟರ್ ಈಗ ವಿವಾದಕ್ಕೆ ಕಾರಣವಾಗಿದ್ದು, ಅಜಯ್ ದೇವಗನ್ ವಿರುದ್ಧ ದೂರು ದಾಖಲಾಗಿದೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದೆಹಲಿಯ ತಿಲಕ್‌ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕಾರ ದೇವ್‌ಗನ್‌ ವಿರುದ್ದ ದೂರು ನೀಡಲಾಗಿದೆ.

ಪೋಸ್ಟರ್‌ನಲ್ಲಿ ನಾಯಕ ಅಜಯ್‌ ದೇವ್‌ಗನ್‌ ಅವರು ಶೂ ಧರಿಸಿ ಶಿವನ ಚಿತ್ರದ ಮೇಲೆ ಹತ್ತುತ್ತಿರುವು ವಿವಾದಕ್ಕೆ ಕಾರಣವಾಗಿದ್ದು, ಇದು ಶಿವನ ಭಕ್ತರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ನೋವು ತಂದಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಮೇ 22 ರಂದು ಬಿಡುಗಡೆ ಮಾಡಿದ ಕೆಲ ಪೋಸ್ಟರ್‌ಗಳಲ್ಲಿ ಅಜಯ್‌ ದೇವ್‌ಗನ್‌ ಅವರು ಹಿಮದಿಂದ ಮಾಡಿದ ತ್ರಿಶೂಲ ಹಿಡಿದ ಪೋಸ್‌ನಲ್ಲಿ ಕಂಡು ಬಂದಿದ್ದಾರೆ. ಭರ್ಜರಿ ಬಜೆಟ್‌ನ ಅದ್ದೂರಿ ಚಿತ್ರದ ಬಿಡುಗಡೆ ಗೆ ಅಕ್ಟೋಬರ್‌ 28 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments