ಬಾಲಿವುಡ್ ನಟ ಇಮ್ರಾನ್ ಹಶ್ಮಿ 
ಬಾಲಿವುಡ್

ಇಮ್ರಾನ್ ಹಶ್ಮಿ-ಪತ್ನಿ ಒಪ್ಪಂದ ನಿಮಗೆ ಗೊತ್ತೇ? ಕಿಸ್ ಮಾಡಿದ ಪ್ರತಿ ಸಿನೆಮಾಗೆ ಪ್ರತಿಯಾಗಿ ಒಂದು ಬ್ಯಾಗ್!

ತೆರೆಯ ಮೇಲೆ ತಮ್ಮ ಚುಂಬನಕ್ಕೆ ಪ್ರಖ್ಯಾತವಾಗಿ 'ಸರಣಿ ಕಿಸ್ಸರ್' ಎಂಬ ಬಿರುದು ಪಡೆದಿರುವ ಬಾಲಿವುಡ್ ನಟ ಇಮ್ರಾನ್ ಹಶ್ಮಿಅವರು ತಮ್ಮ ಪತ್ನಿ ಪರ್ವೀಣ್ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಮಗೆ ಗೊತ್ತೇ?

ಮುಂಬೈ: ತೆರೆಯ ಮೇಲೆ ತಮ್ಮ ಚುಂಬನಕ್ಕೆ ಪ್ರಖ್ಯಾತವಾಗಿ 'ಸರಣಿ ಕಿಸ್ಸರ್' ಎಂಬ ಬಿರುದು ಪಡೆದಿರುವ ಬಾಲಿವುಡ್ ನಟ ಇಮ್ರಾನ್ ಹಶ್ಮಿಅವರು ತಮ್ಮ ಪತ್ನಿ ಪರ್ವೀಣ್ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಮಗೆ ಗೊತ್ತೇ? ನಟ ತಾವು ಕಿಸ್ ಮಾಡಿದ ಸಿನೆಮಾದ ಪ್ರತಿಯಾಗಿ ಅವರ ಪತ್ನಿಗೆ ಒಂದು ಬ್ಯಾಗ್ ಕೊಡಿಸಿ ಸಮಾಧಾನ ಮಾಡುತ್ತಾರಂತೆ!

ತಮ್ಮ ಪುಸ್ತಕ 'ದ ಕಿಸ್ ಆಫ್ ಲೈಫ್' ಬಿಡುಗಡೆಯಲ್ಲಿ ನಟ ಚುಂಬಿಸುವ ದೃಶ್ಯಗಳಿಗೆ ಅವರ ಪತ್ನಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಪ್ರಶ್ನೆಗೆ "ಅವರು ಪ್ರತಿ ಬಾರಿ ಗೊಣಗುತ್ತಾರೆ. ಆದರೆ ಇತ್ತೀಚೆಗೆ ಅವರು ಅಷ್ಟು ಜೋರಾಗಿ ಹೊಡೆಯುವುದಿಲ್ಲ, ಈ ಹಿಂದೆ ಬ್ಯಾಗ್ ಹಿಡಿದು ಹೊಡೆಯುತ್ತಿದ್ದರು ಈಗ ಕೈನಲ್ಲಷ್ಟೇ. ದಿನಕಳೆದಂತೆ ಅವರು ಹೊಂದಿಕೊಳ್ಳುತ್ತಿದ್ದಾರೆ" ಎಂದು ಚಟಾಕಿ ಹಾರಿಸಿದ್ದಾರೆ.

ಅವರಿಗೆ ದುಬಾರಿ ಆಭರಣ ಕೊಡಿಸಿ ಸಮಾಧಾನ ಮಾಡುತ್ತೀರಾ ಎಂಬ ಪ್ರಶ್ನೆಗೆ "ಪ್ರತಿ ಸಿನೆಮಾದ ಪ್ರತಿ ಚುಂಬನಕ್ಕೆ ಅವರಿಗೆ ಬ್ಯಾಗ್ ಕೊಡಿಸುತ್ತೇನೆ. ಅವರ ಬಳಿ ಕಪಾಟಿನ ತುಂಬ ಚೀಲಗಳಿವೆ. ಚೀಲಗಳಿಗೆ ಮುಡುಪಾದ ಒಂದು ಕಪಾಟಿದೆ" ಎಂದು ನಗೆಚಟಾಕಿ ಮುಂದುವರಿಸಿ ಹೇಳಿದ್ದಾರೆ.

ತಮ್ಮ ಕಳೆದ ಸಿನೆಮಾ 'ಅಜರ್' ನಲ್ಲಿ ನರ್ಗಿಸ್ ಫಕ್ರಿ ಜೊತೆಗೆ ಅಸಂಖ್ಯಾತ ಕಿಸ್ ಗಳಲ್ಲಿ ತೊಡಗಿದ್ದರಿಂದ ಪತ್ನಿಗೆ ಎಷ್ಟು ಚೀಲಗಳನ್ನು ಕೊಡಬೇಕಾಗಿ ಬಂತು ಎಂಬ ಪ್ರಶ್ನೆಗೆ ಇಮ್ರಾನ್ "ಚುಂಬನ ಎಷ್ಟೇ ಇರಲಿ ಸಿನೆಮಾ ಒಂದಕ್ಕೆ ಬ್ಯಾಗ್ ಮಾತ್ರ ಒಂದೇ" ಎಂದಿದ್ದಾರೆ.

'ಮರ್ಡರ್', 'ಜೆಹೆರ್', 'ಅಕ್ಸರ್', 'ಆಶಿಕ್ ಬನಾಯ ಅಪ್ನೆ' , 'ಗ್ಯಾಂಗ್ಸ್ಟರ್' ಮುಂತಾದ ಸಿನೆಮಾಗಳಲ್ಲಿ ಅಸಂಖ್ಯಾತ ಚುಂಬನ ದೃಶ್ಯಗಳಲ್ಲಿ ಅಭಿನಯಿಸಿರುವ ಇಮ್ರಾನ್ 'ಸರಣಿ ಕಿಸ್ಸರ್' ಎಂಬ ಬಿರುದು ಪಡೆದಿರುವುದು ವಿಶೇಷ.

'ಶಾಂಗೈ' ಸಿನೆಮಾದಲ್ಲಿ ಯಾವುದೇ ಚುಂಬನ ದೃಶ್ಯಗಳು ಇಲ್ಲದೆ ಹೋದದಿರಿಂದ ಸಿನೆಮಾ ನೆಲಕಚ್ಚಲಾಯಿತು ಎಂದೇ ನಂಬಲಾಗಿರುವುದರ ಬೆಗ್ಗೆ ಪ್ರಶ್ನಿಸಿದಾಗ "ನಾನು ಕಿಸ್ ಮಾಡಿರುವ ಕೆಲವು ಸಿನೆಮಾಗಳು ಕೂಡ ಸೋತಿವೆ" ಎಂದಿದ್ದರೆ.

'ರಾಸ್ ರಿಬೂಟ್' ಇಮ್ರಾನ್ ಅವರ ಮುಂದಿನ ಚಿತ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ