ಮುಕೇಶ್ ಅಂಬಾನಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ಕೈ ಕೈ ಹಿಡಿದು ಓಡಾಡಿದ ರಣವೀರ್-ದೀಪಿಕಾ ಜೋಡಿ
ಮುಂಬೈ: ಬಾಲಿವುಡ್ ನ ಖ್ಯಾತ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದೂರವಾಗಿದ್ದಾರೆ, ಅವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದೆಲ್ಲ ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಇವೆಲ್ಲ ಸುಮ್ಮನೆ ಗಾಳಿಸುದ್ದಿ, ನಾವಿನ್ನೂ ಜೊತೆಯಾಗಿದ್ದೇವೆ, ನಮ್ಮ ನಡುವಿನ ಪ್ರೀತಿ ಕಡಿಮೆಯಾಗಿಲ್ಲ ಅಂತ ಅವರು ಸಾಬೀತುಪಡಿಸಿದ್ದಾರೆ.
ಇತ್ತೇಚೆಗೆ ಮುಂಬೈಯಲ್ಲಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪಾರ್ಟಿ ಇಟ್ಟುಕೊಂಡಿದ್ದರು. ಉದ್ಯಮಿಗಳು, ಬಾಲಿವುಡ್ ನ ಸ್ಟಾರ್ ಗಳು ಸೇರಿದ್ದ ಪಾರ್ಟಿಯದು. ಅಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಂಜೆಯಿಂದ ರಾತ್ರಿಯವರೆಗೆ ಕೈ ಕೈ ಹಿಡಿದು ಓಡಾಡುತ್ತಿದ್ದರು. ಆ ಪಾರ್ಟಿಯ ಮುಖ್ಯ ಆಕರ್ಷಣೆಯೇ ಅವರಿಬ್ಬರಾಗಿದ್ದರು.
ರಣವೀರ್ ಸಿಂಗ್ ದೀಪಿಕಾ ಜೊತೆ ಹೆಚ್ಚು ಕಾಲ ಕಳೆದರಂತೆ. ಅಷ್ಟೂ ಹೊತ್ತು ದೀಪಿಕಾ ಜೊತೆಗೇ ಇದ್ದು ಆಕೆಯ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರಂತೆ. ಪಾರ್ಟಿಗೆ ಬಂದ ಇತರ ಅತಿಥಿಗಳ ಜೊತೆ ಮಾತನಾಡುವಾಗಲೂ ಕೂಡ ಒಟ್ಟೊಟ್ಟಿಗೆ ಓಡಾಡುತ್ತಿದ್ದರಂತೆ. ಅಂದರೆ ನಾವು ಬೇರೆಯಾಗಿಲ್ಲ, ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಜನರಿಗೆ ಸಾರಿ ಹೇಳಲು ಹೊರಟಂತಿತ್ತಂತೆ ಅವರ ನಡೆ-ನುಡಿ.
ಕೆಲವು ವರದಿಗಳ ಪ್ರಕಾರ ಇವರಿಬ್ಬರೂ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುತ್ತವೆ. ಆದರೆ ಈ ಬಗ್ಗೆ ದೀಪಿಕಾ ಆಗಲಿ, ರಣವೀರ್ ಸಿಂಗ್ ಆಗಲಿ ಖಚಿತಪಡಿಸಿಲ್ಲ.
ಸಂಜಯ್ ಲೀಲಾ ಬನ್ಸಾಲಿಯವರ ಮುಂದಿನ ಚಿತ್ರ ಪದ್ಮಾವತಿಯ ಶೂಟಿಂಗ್ ನಲ್ಲಿ ಇವರಿಬ್ಬರೂ ಸದ್ಯವೇ ಪಾಲ್ಗೊಳ್ಳಲಿದ್ದಾರೆ. ಚಿತ್ರದಲ್ಲಿ ರಣವೀರ್ ರಾಜನ ಪಾತ್ರ ನಿರ್ವಹಿಸುತ್ತಿರುವುದರಿಂದ ದೀಪಿಕಾಳನ್ನು ಆಕರ್ಷಿಸುವ ದೃಶ್ಯಗಳಲ್ಲಿ ಒಟ್ಟಿಗೆ ನಟಿಸುವ ಕೆಲವೊಂದು ಸಂದರ್ಭಗಳಿವೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics