ನೀಲ್ ನಿತಿನ್ ಮುಕೇಶ್ ಮತ್ತು ರುಕ್ಮಿಣಿ ಸಹಯ್ 
ಬಾಲಿವುಡ್

ನೀಲ್ ನಿತಿನ್ ಮುಕೇಶ್ ನಿಶ್ಚಿತಾರ್ಥ; ಮುಂದಿನ ವರ್ಷ ಮದುವೆ

ಬಾಲಿವುಡ್ ನ ಖ್ಯಾತ ಗಾಯಕ ಮುಖೇಶ್ ಅವರ ಮೊಮ್ಮಗ, ನಟ ನೀಲ್ ನಿತಿನ್ ಮುಖೇಶ್ ಅವರ ನಿಶ್ಚಿತಾರ್ಥ...

ಮುಂಬೈ: ಬಾಲಿವುಡ್ ನ ಖ್ಯಾತ ಗಾಯಕ ಮುಖೇಶ್ ಅವರ ಮೊಮ್ಮಗ, ನಟ ನೀಲ್ ನಿತಿನ್ ಮುಖೇಶ್ ಅವರ ನಿಶ್ಚಿತಾರ್ಥ ಮುಂಬೈ ಮೂಲದ ರುಕ್ಮಿಣಿ ಸಹಯ್ ಜೊತೆ ನೆರವೇರಿದ್ದು, ಮುಂದಿನ ವರ್ಷ ಆರಂಭದಲ್ಲಿ ವಿವಾಹ ನೆರವೇರಲಿದೆ.
ನಿತಿನ್ ಅವರ ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮುಂಬೈನ ಜುಹು ಹೊಟೇಲ್ ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆಯಾಗಿದ್ದು. ಉಭಯ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತರಾಗಿದ್ದಾರೆ. ರುಕ್ಮಿಣಿ ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಿತಿನ್ ಶೇರ್ವಾನಿ ಧರಿಸಿದ್ದು, ರುಕ್ಷಿಣಿ ಗುಲಾಬಿ ಮತ್ತು ನೀಲಿ ವರ್ಣದ ಲೆಹಂಗಾದಲ್ಲಿ ಮಿಂಚಿದ್ದರು.
ನೀಲ್ ನಿತಿನ್ ಮುಕೇಶ್ ಅವರು, ಜ್ಹಾನಿ ಗದ್ದರ್, ನ್ಯೂಯಾರ್ಕ್, ಡೇವಿಡ್, 7 ಖೂನ್ ಮಾಫ್, ವಾಜಿರ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!