ಅಕ್ಷಯ್ ಕುಮಾರ್ 
ಬಾಲಿವುಡ್

ದೇಶಪ್ರೇಮ ಸಾರುವ ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್

ಬಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಾದ ಬೇಬಿ, ಏರ್ಲಿಫ್ಟ್, ರುಸ್ತುಂ ನಂತಹ ದೇಶಪ್ರೇಮ ಸಾರುವ ಚಿತ್ರಗಳಲ್ಲಿ ಅಭಿನಯಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಂದು...

ಬಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಾದ ಬೇಬಿ, ಏರ್ಲಿಫ್ಟ್, ರುಸ್ತುಂ ನಂತಹ ದೇಶಪ್ರೇಮ ಸಾರುವ ಚಿತ್ರಗಳಲ್ಲಿ ಅಭಿನಯಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಂದು ದೇಶಪ್ರೇಮ ಸಾರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
1948ರಲ್ಲಿ ಒಲಿಂಪಿಕ್ ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕ ದೊರೆಯಿತು. ಸ್ವಾತಂತ್ರ್ಯ ನಂತರ ಭಾರತ ಜಯಿಸಿದ ಮೊದಲ ಸ್ವರ್ಣ ಪದಕ. ಈ ಕ್ಷಣ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಅಚ್ಚಾಗಿದೆ. ಇದನ್ನೇ ಕಥಾ ವಿಷಯವನ್ನಾಗಿ ರೂಪಿಸಿದ್ದು ಚಿತ್ರಕ್ಕೆ ಗೋಲ್ಡ್ ಎಂದು ಹೆಸರಿಡಲಾಗಿದೆ. 
1948ರಲ್ಲಿ ಕಿಶನ್ ಲಾಲ್ ನಾಯಕತ್ವದಲ್ಲಿ ಭಾರತೀಯ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಯಿಸಿ ಪ್ರಥಮ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತ್ತು. 
ಗೋಲ್ಡ್ ಚಿತ್ರವನ್ನು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ಸೇರಿ ಎಕ್ಸೆಲ್ ಎಂಟರ್ಟೆನ್ಮೆಂಟ್ ನಿರ್ಮಿಸಲಿದ್ದು ಚಿತ್ರವನ್ನು ತಲಾಶ್ ಚಿತ್ರ ಖ್ಯಾತಿಯ ರೀಮಾ ಕಾಗ್ಟಿ ನಿರ್ದೇಶಿಸಲಿದ್ದಾರೆ. ಚಿತ್ರ 2018ರ ಆಗಸ್ಟ್ 18ರಂದು ತೆರೆಗೆ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್​ಗೆ 61 ರನ್ ಗಳ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT