ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

ಇಂದು ನನ್ನ ಕಾಲು ತೋರಿಸಿ 12ರಿಂದ 15 ಉತ್ಪನ್ನಗಳು ಮಾರಾಟವಾಗುತ್ತಿವೆ: ಪ್ರಿಯಾಂಕಾ ಚೋಪ್ರಾ

ತಮ್ಮ ಪ್ರತಿಭೆ, ನಟನೆ, ಸೌಂದರ್ಯದಿಂದ ಹಾಲಿವುಡ್ ಪ್ರವೇಶಿಸಿ ಯಶಸ್ಸಿನ ಉತ್ತುಂಗದಲ್ಲಿರುವ ...

ನವದೆಹಲಿ: ತಮ್ಮ ಪ್ರತಿಭೆ, ನಟನೆ, ಸೌಂದರ್ಯದಿಂದ ಹಾಲಿವುಡ್ ಪ್ರವೇಶಿಸಿ ಯಶಸ್ಸಿನ ಉತ್ತುಂಗದಲ್ಲಿರುವ ಬಾಲಿವುಡ್  ನಟಿ ಪ್ರಿಯಾಂಕಾ ಚೋಪ್ರಾ ಇಂದು ಯೂತ್ ಐಕಾನ್ ಎಂದರೆ ತಪ್ಪಾಗಲಾರದು. ಜಾಗತಿಕ ಮಟ್ಟಕ್ಕೇರಿದ್ದಾರೆ. ಹಾಲಿವುಡ್ ನಲ್ಲಿ ಅವರ ಟಿವಿ ಧಾರಾವಾಹಿ ಕ್ವಾಂಟಿಕೊ ಮತ್ತು ಹಾಲಿವುಡ್ ಚಿತ್ರ ಬೇವಾಚ್ ಭಾರೀ ಕೀರ್ತಿ ತಂದುಕೊಟ್ಟಿದೆ.
ಇತ್ತೀಚೆಗೆ ಡಬ್ಲ್ಯು ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಿಸ್ ವರ್ಲ್ಡ್ ಪದವಿ ಪಡೆಯುತ್ತೇನೆ ಅನ್ನುವ ನಿರೀಕ್ಷೆಯೇ ತಮಗಿರಲಿಲ್ಲ ಎನ್ನುತ್ತಾರೆ. ತಾವು ಅಮೆರಿಕದಲ್ಲಿ ಶಾಲೆಯಲ್ಲಿ ಓದುತ್ತಿದ್ದಾಗ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಿದ್ದಾಗಿ ಹೇಳಿಕೊಂಡರು.
ಡಬ್ಲ್ಯು ಮ್ಯಾಗಜೀನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪ್ರಿಯಾಂಕಾ ಹೀಗೆ ಹೇಳಿರುವುದು ಪ್ರಸಾರವಾಗಿದೆ.'' ನಾನು ಹದಿಹರೆಯವದಳಿದ್ದಾಗ ನಾನು ಗಂಡುಬೀರಿ ಥರ ಇದ್ದೆ. ದೇಹದ ಮೇಲೆ ಕಲೆಗಳಿದ್ದವು. ನನ್ನ ತೊಡೆ, ಕಾಲುಗಳ ಬಗ್ಗೆ ನನಗೇ ಮುಜುಗರವಿತ್ತು. ಏಕೆಂದರೆ ಅವು ಜಗತ್ತಿನ ಅಂತಹ ಸುಂದರ ಕಾಲುಗಳೇನೂ ಆಗಿರಲಿಲ್ಲ. ಆದರೆ ಕ್ರಮೇಣ ನನಗೆ ದೇಹ ಸೌಂದರ್ಯದ ಮಹತ್ವ ಏನೆಂಬ ಅರಿವಾಯಿತು. ಆಗಲೇ ನಾನು ಎಚ್ಚೆತ್ತುಕೊಂಡು ದೇಹದ ಆರೈಕೆಗೆ ಪ್ರಾಮುಖ್ಯ ನೀಡತೊಡಗಿದೆ. ಇವತ್ತು ನನ್ನ ಸುಂದರ ಕಾಲುಗಳು 12ರಿಂದ 15 ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುತ್ತಿವೆ. ನನಗಿದು ಸಾಧ್ಯವಾಗಿದೆ ಎಂದಾದರೆ  ನನ್ನಂತಹ ಯಾವುದೇ ಹುಡುಗಿಗೂ ಕೂಡ ಇದು ಸಾಧ್ಯವಾಗಬೇಕು'. ಎಂದು ಪ್ರಿಯಾಂಕಾ ಚೋಪ್ರಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್