ಸನ್ನಿ ಲಿಯೋನ್ 
ಬಾಲಿವುಡ್

ನನ್ನ ಸಾಕ್ಷ್ಯ ಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ನನಗೆ ಇಷ್ಟವಿಲ್ಲ: ಸನ್ನಿ ಲಿಯೋನ್

ತನ್ನ ಜೀವನ ಚರಿತ್ರೆ ಆಧರಿತ ಮೋಸ್ಲ್ಟಿ ಸನ್ನಿ ಹೆಸರಿನ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ಸನ್ನಿ ಲಿಯೋನ್ ಗೆ...

ಮುಂಬಯಿ: ತನ್ನ ಜೀವನ ಚರಿತ್ರೆ ಆಧರಿತ ಮೋಸ್ಲ್ಟಿ ಸನ್ನಿ ಹೆಸರಿನ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ಸನ್ನಿ ಲಿಯೋನ್ ಗೆ ಇಷ್ಟವಿಲ್ಲವಂತೆ.

ಸಾಂಪ್ರದಾಯಿಕ ಸಿಖ್‌ ಕುಟುಂಬದಲ್ಲಿ ಹುಟ್ಟಿ, ವಯಸ್ಕರ ಚಿತ್ರ ಜಗತ್ತಿನ ಜನಪ್ರಿಯ ತಾರೆಯಾಗಿ ಬೆಳೆದ ಮತ್ತು ಬಾಲಿವುಡ್‌ನ ಮುಖ್ಯವಾಹಿನಿಯ ಚಿತ್ರಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡ ಕಥನವನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.ಈ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ನನಗೆ ಇಷ್ಟವಿಲ್ಲ ಎಂದು ಸನ್ನಿ ಹೇಳಿದ್ದಾಳೆ.

ಈ ಸಾಕ್ಷ್ಯ ಚಿತ್ರದಲ್ಲಿ ನನ್ನ ಬದುಕಿನ ಕಥನಕ್ಕಿಂತಲೂ ಬೇರೆಯವರು ನನ್ನ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳೇ ತುಂಬಿವೆ. ನನ್ನ ಕುರಿತು ಬೇರೆಯವರು ಯಾವ ದೃಷ್ಟಿಕೋನ ಹೊಂದಿದ್ದಾರೆ ಎಂಬುದನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ.

ಇದು ನನ್ನ ಬದುಕನ್ನು ಆಧರಿಸಿದ ಜೀವನಚಿತ್ರವಲ್ಲ. ಅವರಿಗೆ ಏನು ಬೇಕೋ ಅದನ್ನು ಬರೆದುಕೊಂಡು ಚಿತ್ರ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಡಿಸೆಂಬರ್ ನಲ್ಲಿ ಮೋಸ್ಟ್ಲಿ ಸನ್ನಿ ಸಾಕ್ಷ್ಯಚಿತ್ರ ರಿಲೀಸ್ ಆಗಲಿದೆ.

ದಿಲಿಪ್‌ ಮೆಹ್ರಾ ನಿರ್ದೇಶಿಸಿರುವ ’ಮೋಸ್ಟ್ಲಿ ಸನ್ನಿ’ ಸಾಕ್ಷ್ಯಚಿತ್ರವು ಇತ್ತೀಚೆಗೆ ಟೊರೆಂಟೊ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್