ಅಮೀರ್ ಖಾನ್, ಕಿರಣ್ ರಾವ್(ಸಂಗ್ರಹ ಚಿತ್ರ) 
ಬಾಲಿವುಡ್

ಅಮೀರ್ ಖಾನ್, ಕಿರಣ್ ರಾವ್ ಗೆ ಎಚ್1ಎನ್1 ಜ್ವರ

ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದಾರೆ...

ಮುಂಬೈ/ಪುಣೆ: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದಾರೆ. ಇಬ್ಬರಿಗೂ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು ಗುಣಮುಖರಾಗುವವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. 
ತೀವ್ರ ಜ್ವರವೆಂದು ಪರೀಕ್ಷೆ ಮಾಡಿಸಿ ನೋಡಿದಾಗ ಇಬ್ಬರಿಗೂ ಎಚ್1ಎನ್1 ಇರುವುದು ದೃಢವಾಗಿದೆ. ವೈದ್ಯರು ಒಂದು ವಾರ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ದಂಪತಿಗೆ ಸೂಚಿಸಿದ್ದಾರೆ. ಮೊದಲಿಗೆ ಅಮೀರ್ ಗೆ ಕಾಣಿಸಿಕೊಂಡ ಎಚ್1 ಎನ್ 1 ಸೋಂಕು ನಂತರ ಅವರ ಪತ್ನಿಗೆ ಹಬ್ಬಿದೆ.
ಅಮೀರ್ ಮತ್ತು ಕಿರಣ್ ನಿನ್ನೆ ಪುಣೆಯ ತಮ್ಮ ಪಾನಿ ಫೌಂಡೇಶನ್ ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಜ್ವರದ ಕಾರಣ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಅಮೀರ್ ಮತ್ತು ಕಿರಣ್ ರಾವ್ ವಿಡಿಯೊ ಕಾನ್ಫರೆನ್ಸ್ ಮೂಲಕ ತಿಳಿಸಿದ್ದರು. 
ಇವತ್ತು ಸ್ನೇಹಿತರ ದಿನವಾದ ಕಾರಣ ನನ್ನ ಬದಲಿಗೆ ನನ್ನ ಸ್ನೇಹಿತ ಶಾರೂಕ್ ಖಾನ್ ಭಾಗವಹಿಸುತ್ತಿದ್ದಾರೆ ಎಂದು ವಿಡಿಯೊದಲ್ಲಿ ಅಮೀರ್ ಹೇಳಿದ್ದರು. ಅದರಂತೆ ನಿನ್ನೆ ನಡೆದ ಪಾನಿ ಫೌಂಡೇಶನ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ನೀತಾ ಅಂಬಾನಿ, ಉದ್ಯಮಿ ರಾಜೀವ್ ಬಜಾಜ್, ಬಾಲಿವುಡ್ ನಟ ಶಾರೂಕ್ ಖಾನ್ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT