ಶಾರುಖ್ ಖಾನ್ 
ಬಾಲಿವುಡ್

ಪಾಕಿಸ್ತಾನದಲ್ಲಿ ರಾಯೀಸ್ ಸಿನಿಮಾ ಪ್ರದರ್ಶನ ರದ್ದು

ಪಾಕಿಸ್ತಾನ ಚಿತ್ರಮಂದಿರಗಳಲ್ಲಿ ಭಾನುವಾರ ಸಖತ್ ಹಿಟ್ ಕಂಡಿದ್ದ ಶಾರುಖ್ ಖಾನ್ ಅಭಿನಯದ ರಾಯೀಸ್ ಚಿತ್ರದ ಪ್ರದರ್ಶನವನ್ನು...

ಇಸ್ಲಮಾಬಾದ್: ಪಾಕಿಸ್ತಾನ ಚಿತ್ರಮಂದಿರಗಳಲ್ಲಿ  ಭಾನುವಾರ ಸಖತ್ ಹಿಟ್ ಕಂಡಿದ್ದ ಶಾರುಖ್ ಖಾನ್ ಅಭಿನಯದ  ರಾಯೀಸ್ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.

ಸಿನಿಮಾದಲ್ಲಿ ಮುಸ್ಲಿಮರ ಬಗ್ಗೆ ಅನುಚಿತವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಶಾರೂಖ್ ಖಾನ್ ಮತ್ತು ಮಹಿರಾ ಖಾನ್ ನಟನೆಯ ಈ ಚಿತ್ರ ಕಳೆದ  ಪಾಕಿಸ್ತಾನದಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿತ್ತು. ಆದರೆ ಪಾಕಿಸ್ತಾನ ಸಿನಿಮಾ ಸೆನ್ಸಾರ್ ಬೋರ್ಡ್ ಚಿತ್ರ ಪ್ರದರ್ಶಿಸದಿರುವಂತೆ ಸೂಚಿಸಿದೆ ಎಂದು ಸ್ಥಳೀಯ ಪತ್ರಿಕೆ ಡಾನ್ ವರದಿ ಮಾಡಿದೆ.

ಸಿನಿಮಾದಲ್ಲಿ ಮುಸ್ಲಿಮರನ್ನು ಕ್ರಿಮಿನಲ್ ಗಳಂತೆ ಚಿತ್ರಿಸಲಾಗಿದೆ, ಧರ್ಮವೊಂದನ್ನು ಗುರಿಯಾಗಿಸಿಕೊಂಡು ವ್ಯಕ್ತಿಗಳನ್ನು ವಾಂಟೆಂಡ್ ಪರ್ಸನ್ ಮತ್ತು ಭಯೋತ್ಪಾದಕರಂತೆ ಬಿಂಬಿಸಲಾಗಿದೆ ಎಬ ಉದ್ದೇಶದಿಂದ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಪಾಕಿಸ್ತಾನ ಕಲಾವಿದರನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಯೀಸ್ ಚಿತ್ರದ ಪ್ರಮೋಷನ್ ನಲ್ಲಿ ಪಾಕ್ ಕಲಾವಿದೆ ಮಹಿರಾ ಖಾನ್ ಭಾಗವಹಿಸಿರಲಿಲ್ಲ. ಇದು ಎರಡು ದೇಶಗಳ ಸಂಬಂಧದ ಮೇಲೆ ಮತ್ತಷ್ಟು ಹುಳಿ ಹಿಂಡಿತ್ತು.

ಪಾಕಿಸ್ತಾನದಲ್ಲಿ ಭಾರತೀಯ ಚಿತ್ರ ಪ್ರದರ್ಶವನ್ನು ರದ್ದುಗೊಳಿಸಿದ್ದ  ಹಲವು ತಿಂಗಳುಗಳ ನಂತರ ಕಾಬಿಲ್ ಚಿತ್ರವನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT