ಬೆಂಗಳೂರು: ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯಗೆ ಕಂಕಣ ಭಾಗ್ಯ ಕೂಡಿಬಂದಿದೆ.
ಆರ್.ಆರ್ ನಗರದ ಮಾಜಿ ಕಾರ್ಪೊರೇಟರ್ ರಾಮಚಂದ್ರ ಅವರು ಪುತ್ರ ಜಗದೀಶ್ ಜತೆ ಮದುವೆಗೆ ಮಾತುಕತೆಗಳು ನಡೆದಿವೆ. ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಅಮೂಲ್ಯ ಮತ್ತು ಜಗದೀಶ್ ವಿವಾಹದ ಮಾತುಕತೆ ನಡೆಸಲಾಗಿದ್ದು ಎರಡು ಕುಟಂಬಗಳ ಪರಸ್ಪರ ಸಮ್ಮತಿಯೊಂದಿಗೆ ಮಾರ್ಚ್ 6 ರಂದು ನಿಶ್ಚಿತಾರ್ಥ ನಡೆಯಲಿದೆ.
ಇನ್ನು ಜಗದೀಶ್ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ ಎಂದು ಕುಟಂಬದ ಮೂಲಗಳು ತಿಳಿಸಿವೆ.