ಅಕ್ಷಯ್ ಕುಮಾರ್ 
ಬಾಲಿವುಡ್

ಬೆಂಗಳೂರು ಲೈಂಗಿಕ ಕಿರುಕುಳ ವಿರುದ್ಧ ಅಕ್ಷಯ್ ಕುಮಾರ್ ಆಕ್ರೋಶ, ಭಾವನಾತ್ಮಕ ವೀಡಿಯೊ ಸಂದೇಶ

ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಕಿಗ ದೌರ್ಜನ್ಯ ದೇಶವ್ಯಾಪ್ತಿ ಸುದ್ದಿಯಾಗಿದ್ದು...

ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಕಿಗ ದೌರ್ಜನ್ಯ ದೇಶವ್ಯಾಪ್ತಿ ಸುದ್ದಿಯಾಗಿದ್ದು, ಈ ಘಟನೆ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಕ್ರೋಶ್ ವ್ಯಕ್ತಪಡಿಸಿದ್ದಾರೆ. 
ಒಂದು ಮಾತು ಹೇಳ್ತೆನೆ, ಮನಸ್ಸಿನಿಂದ ಹೇಳ್ತಿದೀನಿ ಇಂದು ನಾನು ಮನುಷ್ಯ ಎಂದು ಹೇಳಿಕೊಳ್ಳೋಕೆ ನಾಚಿಕೆಯಾಗುತ್ತಿದೆ. ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ನಿಜಕ್ಕೂ ಅಕ್ಷಮ್ಯ. ಇಂತಹ ಘಟನೆಗಳು ಕಂಡರೇ ನಿಮಗೆ ಎನ್ನನಿಸುತ್ತದೆಯೋ ಗೊತ್ತಿಲ್ಲ ನನಗಂತು ಆಕ್ರೋಶ ಉಕ್ಕುತ್ತಿದೆ. ನಾನು ಒಬ್ಬ ಮಗಳ ತಂದೆಯಾಗಿದ್ದು ಸಮಾಜ ಹುಡುಗಿಯರಿಗೆ ಭದ್ರತೆ ನೀಡಲು ಸಾಧ್ಯವಾಗದೇ ಇದ್ದರೆ ಅಂತವರು ತಾವು ಮನುಷ್ಯರು ಅಂತ ಹೇಳಿಕೊಳ್ಳುವ ಯಾವುದೇ ಹಕ್ಕಿಲ್ಲ. ಇನ್ನೊಂದು ನಾಚಿಕೆಗೇಡಿನ ವಿಷಯವೆಂದರೆ ಕೆಲವರು ಇಂತಹ ಲೈಂಗಿಕ ದೌರ್ಜನ್ಯಗಳಿಗೆ ತಮ್ಮದೇ ವಿಡಂಬಣೆಯನ್ನು ಮಾಡುತ್ತಾರೆ. ಹುಡುಗಿಯರು ಹೊರಗಡೆ ಹೋಗುವಾಗ ಚಿಕ್ಕಪುಟ್ಟ ಉಡುಪುಗಳನ್ನು ಹುಡುತ್ತಾರೆ. ಮಧ್ಯ ರಾತ್ರಿ ಹೊರಗಡೆ ತಿರುಗುವುದರಿಂದ ಇಂತಹ ಘಟನೆಗಳು ನಡೆಯುತ್ತವೆ ಅಂತ. ನೀವು ತಿಳ್ಕೊಳ್ಳಬೇಕಾಗಿರುವುದು ಪುಟ್ಟದಾಗಿರುವುದು ಉಡುಪಲ್ಲ ನಿಮ್ಮ ಮನಸ್ಥಿತಿ. ಇವತ್ತು ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದಿರುವುದು ಮುಂದೆ ನಿಮ್ಮ ಅಕ್ಕ-ತಂಗಿ, ಮಗಳ ಮೇಲೆ ನಡೆಯಬಹುದು. ಲೈಂಗಿಕ ದೌರ್ಜನ್ಯ ನಡೆಸಿದರು ಅನ್ಯಗ್ರಹದಿಂದ ಬಂದವರಲ್ಲಾ, ನಮ್ಮ ನಿಮ್ಮೊಂದಿಗಿರುವವರು. ನಾವು ಜಾಗೃತರಾಗಲು ಈಗಲು ಸಮಯವಿದೆ. ಈ ದೇಶದ ಹೆಣ್ಣುಮಕ್ಕಳು ನಿಮಗೆ ದಿಟ್ಟ ಉತ್ತರ ನೀಡಲು ಮುಂದಾದರೇ ನಿಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. 
ಇದೇ ವೇಳೆ, ಹೆಣ್ಣುಮಕ್ಕಳಿಗೂ ನಾನು ಕೆಲವೊಂದು ಉಪಾಯಗಳನ್ನು ನೀಡುತ್ತೇನೆ. ನಾವು ಹುಡುಗರಿಗಿಂತ ಯಾವುದರಲ್ಲು ಕಡಿಮೆ ಇಲ್ಲ. ನಿಮ್ಮ ರಕ್ಷಣೆಗಾಗಿ ನೀವು ಏನು ಬೇಕಾದರೂ ಮಾಡಬಹುದು. ನಿಮ್ಮ ಮೇಲೆ ದೌರ್ಜನ್ಯ ನಡೆಸುವ ಹುಡುಗರನ್ನು ಮಣಿಸಲು ಮಾರ್ಶಲ್ ಆರ್ಟ್ಸ್ ನಲ್ಲಿ ಕೆಲ ವಿದ್ಯೆಗಳಿವೆ. ಅವುಗಳನ್ನು ಕಲಿಯಿರಿ ಆಗ ನಿಮ್ಮ ಮೇಲೆ ಯಾರು ದೌರ್ಜನ್ಯ ಹೆದರುತ್ತಾರೆ ಎಂದು ಅಕ್ಷಯ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT