ಅಮಿತಾಬ್ ಬಚ್ಚನ್ 
ಬಾಲಿವುಡ್

ನನ್ನ ಪಾತ್ರಗಳು ನನ್ನ ವಯಸ್ಸಿಗೆ ಸೂಕ್ತವಾಗಿವೆ: ಅಮಿತಾಬ್ ಬಚ್ಚನ್

ಸಾಮಾಜಿಕ ಕಳಕಳಿಯುಳ್ಳ ಪಾತ್ರದಲ್ಲಿ ಪಾತ್ರದಲ್ಲಿ ನನ್ನ ವಯಸ್ಸಿಗೆ ತಕ್ಕಂತ ನಿರ್ಣಾಯಕ ಪಾತ್ರಗಳನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಬಾಲಿವುಡ್ ಬಿಗ್ -...

ಮುಂಬಯಿ: ಸಾಮಾಜಿಕ ಕಳಕಳಿಯುಳ್ಳ ಪಾತ್ರದಲ್ಲಿ ಪಾತ್ರದಲ್ಲಿ ನನ್ನ ವಯಸ್ಸಿಗೆ ತಕ್ಕಂತ ನಿರ್ಣಾಯಕ ಪಾತ್ರಗಳನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಬಾಲಿವುಡ್ ಬಿಗ್ -ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

2017ನೇ ವರ್ಷದಲ್ಲಿ ಮೊಟ್ಟ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಅಮಿತಾಬ್ ತಮ್ಮ ಮುಂದಿನ ಸಿನಿಮಾಗಳಾದ ಸರ್ಕಾರ್-3, ಆಂಕೇನ್ 2 ಬಗ್ಗೆ ತಮ್ಮ ಅನುಭವ  ಹಂಚಿಕೊಂಡಿದ್ದಾರೆ.

ಸಿನಿಮಾಗಳ ಆಯ್ಕೆ ಮೊದಲಿನಂತ ಇದೆ. ಆದರೆ ಮಾಡುವ ಕೆಲಸದ ವೈಖರಿ ಬದಲಾಗಿದೆ. ಪಾತ್ರದ ಆಯ್ಕೆಯಲ್ಲಿ  ಯಾವುದೇ ಬದಲಾವಣೆ ಆಗಿಲ್ಲ, ಆದರೇ ಬದಲಾವಣೆ ಆಗಿರುವುದು ವಯಸ್ಸಿನಲ್ಲಿ ಎಂದು ಹೇಳಿದ್ದಾರೆ.

ನಾನು ಒಬ್ಬ ನಟನಾಗಿ ನಿರ್ಧಿಷ್ಟ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಬೇಕು, ನಾನು ಉತ್ತಮವಾದದ್ದನ್ನೇ ಮಾಡಲು ಪ್ರಯತ್ನಿಸುತ್ತಿರುತ್ತೇನೆ ಎಂದು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ 72 ವರ್ಷದ ನಟ ಅಮಿತಾಬ್ ತಿಳಿಸಿದ್ದಾರೆ.

ನಾನು ಮಾಡುವ ಕೆಲಸ ನನಗೆ ತೃಪ್ತಿ ನೀಡಬೇಕು ಎಂದು ಹೇಳಿರುವ ಅಮಿತಾಬ್ ದೀವಾರ್, ಜಂಝೀರ್, ಡಾನ್ ಮತ್ತು ಶೋಲೆ ಚಿತ್ರಗಳಲ್ಲಿನ ತಮ್ಮ ಪಾತ್ರದ ಬಗ್ಗೆ ಮೆಲುಕು ಹಾಕಿದ್ದಾರೆ. ವಿವಿಧ ರೀತಿಯ ಪಾತ್ರಗಳಲ್ಲಿ ಅಭಿನಯಿಸಿರುವ ಅಮಿತಾಬ್ ಬಚ್ಚನ್,  ಪಾ ಸಿನಿಮಾದಲ್ಲಿ 12 ವರ್ಷದ ಬಾಲಕನಾಗಿ, ಪಿಕುವಿನಲ್ಲಿ ಬಂಗಾಳಿ ತಂದೆಯಾಗಿ ಅಭಿನಯಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

ಶೇ,25 ರಷ್ಟು ಯಕೃತ್ ನಿಂದ ಬದುಕುತ್ತಿರುವ ಅಮಿತಾಬ್ ಬಚ್ಚನ್ ಧೂಮಪಾನ ಮಧ್ಯಪಾನಗಳಿಂದ ದೂರ ಉಳಿದಿದ್ದಾರೆ, ಮಿತವಾದ ಆಹಾರ, ನಿಯಮಿತ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಂಡಿರುವುದಾಗಿ ಹೇಳಿದ್ದಾರೆ.

2017 ನೇ ವರ್ಷಕ್ಕೆ ನಿಮ್ಮ ನಿರ್ಣಯ ಏನು ಎಂಬ ಪ್ರಶ್ನೆಗೆ ಉತ್ತರಿಸಿರರುವ ಅಮಿತಾಬ್,  ವೃತ್ತಿ ಬದುಕಿನಲ್ಲಿ ಹಾಗೂ ವಯಕ್ತಿಕ ಬದುಕಿನಲ್ಲಿ ನಾನು ಯಾವುದೇ ನಿರ್ಣಯ ಕೈಗೊಳ್ಳುವ ಅವಶ್ಯಕತೆಯಿಲ್ಲ, ಅಂದುಕೊಂಡಿದ್ದನ್ನು ಮಾಡಲು ಏಕೆ ವರ್ಷಗಟ್ಟಲೇ ಕಾಯಬೇಕು, ನಮಗೆ ಬೇಕಾದಾಗ ಅವಶ್ಯಕವಿರುವ ಕೆಲಸವನ್ನು ಮಾಡಬೇಕು , ಹೀಗಾಗಿ ನಾನು ಯ.ಾವ ನಿರ್ಣಯ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಕಳೆದ ವರ್ಷ ತೆರೆ ಕಂಡ ಪಿಕುವಿನಂತ ಸಾಮಾಜಿಕ ಕಳಕಳಿಯುಳ್ಳ ಪಾತ್ರ ನಿರ್ವಹಿಸಲು ನನಗೆ ತುಂಬಾ ಆಸಕ್ತಿಯಿದೆ ಎಂದು ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಅಭಿನಯದ ಸರ್ಕಾರ್ 3 ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್