ಬಾಲಿವುಡ್

ತಮ್ಮದೇ ಮೇಣದ ಪ್ರತಿಮೆಯನ್ನು ನೋಡಿ ಫೋಟೋ ಎಂದುಕೊಂಡ ಬಿಗ್ ಬೀ!

Srinivas Rao BV
ನವದೆಹಲಿ: ಮ್ಯಾಡಮ್‌ ಟ್ಯುಸಾಡ್‌ ಮ್ಯೂಸಿಯಂ ಜುಲೈ ನಲ್ಲಿ ಉದ್ಘಾಟನೆಯಾಗಲಿದ್ದು, ಮ್ಯೂಸಿಯಂ ನಲ್ಲಿರುವ ತಮ್ಮ ಮೇಣದ ಪ್ರತಿಮೆಯ ಫೋಟೋ ನೋಡಿರುವ ಬಿಗ್ ಬೀ ಅಮಿತಾಬ್ ಬಚ್ಚನ್ ಅದನ್ನು ತಮ್ಮದೇ ನಿಜವಾದ ಫೋಟೊ ಎಂದುಕೊಂಡಿದ್ದರಂತೆ. 
ಈ ಬಗ್ಗೆ ಸ್ವತಃ ಬಿಗ್ ಬೀ ಟ್ವೀಟ್ ಮಾಡಿದ್ದು, ನವದೆಹಲಿಯಲ್ಲಿರುವ ಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ ನಲ್ಲಿರುವ ಪ್ರತಿಮೆಯ ಫೋಟೊವನ್ನು ಕಂಡು ಅದು ನನ್ನ ನಿಜವಾದ ಫೋಟೊ ಎಂದುಕೊಂಡಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ತದ್ರೂಪಿ ಮೇಣದ ಪ್ರತಿಮೆಯ ಫೋಟೋವನ್ನು ಎಎನ್ಐ ಟ್ವೀಟ್ ಮಾಡಿತ್ತು, ಎಎನ್ಐ ಟ್ವೀಟ್ ಗೆ ಅಮಿತಾಬ್ ಬಚ್ಚನ್ ಅಭಿಮಾನಿಗಳು ಹಾಗೂ ಸ್ವತಃ ಅಮಿತಾಬ್ ಬಚ್ಚನ್ ರಿಟ್ವೀಟ್ ಮಾಡಿದ್ದಾರೆ. 
ನವದೆಹಲಿಯಲ್ಲಿ ಜುಲೈ ತಿಂಗಳಲ್ಲಿ ಉದ್ಘಾಟನೆಯಾಗಲಿರುವ ಮ್ಯಾಡಮ್ ಟ್ಯುಸಾಡ್ ಮ್ಯೂಸಿಯಂ ದೇಶದ ಮೊದಲ ಶಾಖೆಯಾಗಿದ್ದು, ವಿಶ್ವದ 23 ನೇ ಶಾಖೆಯಾಗಲಿದೆ. 
SCROLL FOR NEXT