ಸಂಗ್ರಹ ಚಿತ್ರ 
ಬಾಲಿವುಡ್

"ದಾಳಿಯಾಗಿ 27 ವರ್ಷಗಳೇ ಕಳೆದರೂ ಶಸ್ತ್ರ ಮುಟ್ಟಿಲ್ಲ..ನಾವು ಶಾಂತಿ ಪ್ರಿಯರು, ಇದು ನಮ್ಮ ದೇಶದ ಹಿರಿಮೆ"

ಕಾಶ್ಮೀರಿ ಪಂಡಿತ ಮೇಲೆ ದಾಳಿಯಾಗಿ ಸಾಮೂಹಿಕ ನಿರ್ಗಮನವಾಗಿ 27 ವರ್ಷಗಳೇ ಕಳೆದರೂ ನಾವು ಅವರಂತೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿಲ್ಲ. ನಾವು ಶಾಂತಿ ಪ್ರಿಯರಾಗಿದ್ದು, ಇದು ನಮ್ಮ ಭಾರತ ದೇಶದ ಹಿರಿಮೆ ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.

ಮುಂಬೈ: ಕಾಶ್ಮೀರಿ ಪಂಡಿತ ಮೇಲೆ ದಾಳಿಯಾಗಿ ಸಾಮೂಹಿಕ ನಿರ್ಗಮನವಾಗಿ 27 ವರ್ಷಗಳೇ ಕಳೆದರೂ ನಾವು ಅವರಂತೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿಲ್ಲ. ನಾವು ಶಾಂತಿ ಪ್ರಿಯರಾಗಿದ್ದು, ಇದು ನಮ್ಮ ಭಾರತ ದೇಶದ ಹಿರಿಮೆ  ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ಮೇಲೆ ದಾಳಿಯಾಗಿ ಅವರು ಕಾಶ್ಮೀರ ತೊರೆದು 27 ವರ್ಷಗಳಾದ ಹಿನ್ನಲೆಯಲ್ಲಿ ಪಂದ್ಯದ ಮೂಲಕ ದಾಳಿಯನ್ನು ಖಂಡಿಸಿರುವ ಅನುಪಮ್ ಖೇರ್ ಅವರು, 1990 ಜನವರಿ 19ರಂದು ಏನಾಯಿತು ಎಂಬುದುನ್ನು  ಯಾವುದೇ ಕಾಶ್ಮೀರಿ ಪಂಡಿತರೂ ಮರೆಯಲು ಸಾಧ್ಯವಿಲ್ಲ. ಅಲ್ಲೆಲ್ಲೋ ಮಸೀದಿಗಳಲ್ಲಿ ಕುಳಿತ ಮೌಲ್ವಿಗಳು ಏಕಾಏಕಿ ಕಾಶ್ಮೀರಿ ಪಂಡಿತರು ಕೂಡಲೇ ಮನೆ-ಮಠಗಳನ್ನು ಬಿಟ್ಟು ತೆರಳುವಂತೆ ನಿರ್ದೇಶನ ನೀಡಿದರು. ಅಂದು ರಾತ್ರಿ  ಏನಾಯಿತು ಎಂಬುದನ್ನೂ ಇಂದಿಗೂ ಯಾವುದೇ ಕಾಶ್ಮೀರಿ ಪಂಡಿತರೂ ಮರೆಯಲು ಸಾಧ್ಯವಿಲ್ಲ. ಅಂದಿನ ಕರಾಳ ದಿನವನ್ನು ಆಚರಣೆ ಮಾಡುವದಲ್ಲ. ಬದಲಿಗೆ ನೆನಪು ಮಾಡಿಕೊಳ್ಳಬೇಕು. ಕಾಶ್ಮೀರಿ ಪಂಡಿತರು ತಮ್ಮ ಮೇಲೆ ಆದ  ದಾಳಿಯನ್ನು ತಾಳ್ಮೆಯಿಂದಲೇ ಸಹಿಸಿಕೊಂಡರೇ ಹೊರತು ತಾವೂ ಕೂಡ ಶಸ್ತ್ರಾಸ್ತ್ರ ಹಿಡಿಯಬೇಕು ಎಂದು ಅವರಿಗೆ ಅನಿಸಲಿಲ್ಲ. ಈ ಘೋರ ಘಟನೆ ನಡೆದು 27 ವರ್ಷಗಳೇ ಕಳೆದರೂ ಎಂದಿಗೂ ಶಸ್ತ್ರಾಸ್ತ್ರಗಳನ್ನು ಮುಟ್ಟಿಲ್ಲ.  ಏಕೆಂದರೆ ನಾವು ಶಾಂತಿ ಪ್ರಿಯರಾಗಿದ್ದೇವೆ. ಇದು ದೇಶದ ಹಿರಿಮೆ ಎಂದು ಹೇಳಿದ್ದಾರೆ.

ತಮ್ಮದೇ ಸ್ಥಳಕ್ಕೆ ಇಂದು ಕಾಶ್ಮೀರಿ ಪಂಡಿತರು ಪ್ರವಾಸಿಗರಂತೆ ಹೋಗಿ ಬರುತ್ತಿದ್ದಾರೆ. ಇದು ನಾವು ಶಾಂತಿಪ್ರಿಯರು ಎನ್ನುವುದಕ್ಕೆ ನಿದರ್ಶನವಷ್ಟೇ. ಕಳೆದ ವರ್ಷವೂ ನಾನು ಇದೇ ರೀತಿ ವಿಡಿಯೋವೊಂದನ್ನು ಸಾಮಾಜಿಕ  ಜಾಲತಾಣದಲ್ಲಿ ಹರಿಬಿಟ್ಟಿದ್ದೆ. ಇದೀಗ ಮತ್ತೊಮ್ಮೆ ನಾನು ವಿಡಿಯೋವನ್ನು ಹಾಕುತ್ತಿದ್ದೇನೆ. ಏಕೆಂದರೆ ಈ ಮಾತುಗಳನ್ನು ಕೇಳಿಸಿಕೊಳ್ಳಲು ಇಷ್ಟವಿಲ್ಲದ  "ಆ ಮಂದಿಗೆ" ನಮ್ಮ ಪ್ರತಿಭಟನೆಯ ಕೂಗು ಕೇಳಿಸಬೇಕು ಎಂದು. ಆ  ಮೂಲಕವಾದರೂ ತಾವೆಂತಹ ದೊಡ್ಡ ತಪ್ಪು ಮಾಡಿದ್ದೇವೆ ಎಂದು "ಆ ಮಂದಿಗೆ" ತಿಳಿಯಬೇಕು ಅನುಪಮ್ ಖೇರ್ ಹೇಳಿದ್ದಾರೆ.

ನಟ ಅನುಪಮ್ ಖೇರ್ ಬಿಡುಗಡೆ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!