ಮುಂಬೈ: ಜುಡ್ವಾ-2 ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ನಟಿ ತಾಪ್ಸಿ ಪನ್ನು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂದಿನ ಚಿತ್ರಕ್ಕಾಗಿ ಸಿದ್ಧತೆ ನಡೆಸಿರುವ ತಾಪ್ಸಿ ಪನ್ನು ಸಲ್ಮಾನ್ ಖಾನ್ ಜೊತೆಗಿನ ನಟನೆಯನ್ನು ಎದುರು ನೋಡುತ್ತಿದ್ದಾರೆ. 1997 ರಲ್ಲಿ ತೆರೆ ಕಂಡಿದ್ದ ಜುಡ್ವಾ ಚಿತ್ರದ ಸಿಕ್ವೆಲ್ ಜುಡ್ವಾ-2 ಆಗಿದ್ದು, ಮೊದಲ ಭಾಗದಲ್ಲಿ ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು.
ಚಿತ್ರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತಾಪ್ಸಿ ಪನ್ನು, ಚಿತ್ರೀಕರಣ ಚೆನ್ನಾಗಿ ನಡೆಯುತ್ತಿದೆ, ಸಲ್ಮಾನ್ ಖಾನ್ ಅವರೊಂದಿಗೆ ಒಂದು ದೃಶ್ಯ, ಒಂದು ಹಾಡಿನ ಚಿತ್ರೀಕರಣ ಬಾಕಿ ಇದ್ದು, ಅತಿ ಶೀಘ್ರದಲ್ಲೇ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ, ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿ, ಅವರೊಂದಿಗೆ ನಟಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಜುಡ್ವಾ-1 ಚಿತ್ರದ ಎರಡು ಹಾಡುಗಳನ್ನೂ ಸೀಕ್ವೆಲ್ ನಲ್ಲೂ ಮುಂದುವರೆಸಲಾಗಿದ್ದು, ಊಂಚಿ ಹೈ ಬಿಲ್ಡಿಂಗ್ ಹಾಗೂ ಟನ್ ಟನಾ ಟನ್ ಹಾಡುಗಳನ್ನು ಉಳಿಸಿಕೊಳ್ಳಲಾಗಿದ್ದು, ವರುಣ್ ಧವನ್, ತಾಪ್ಸಿ ಪನ್ನು, ಜಾಕ್ವೆಲೀನ್ ಫರ್ನಾಂಡಿಸ್ ನಟಿಸುತ್ತಿದ್ದಾರೆ, ನನಗಂತೂ ಜುಡ್ವಾ 2 ಚಿತ್ರದಲ್ಲಿ ನಟಿಸುತ್ತಿರುವುದೇ ಸಖತ್ ಖುಷಿ ನೀಡಿದೆ ಎನ್ನುತ್ತಾರೆ ತಾಪ್ಸಿ.