ಅರ್ಜುನ್ ಕಪೂರ್ 
ಬಾಲಿವುಡ್

ನಮಸ್ತೆ ಇಂಗ್ಲೆಂಡ್‌ ಸಿನಿಮಾದಲ್ಲಿ ಅರ್ಜುನ್ ಕಪೂರ್

2007 ರಲ್ಲಿ ತೆರೆ ಕಂಡಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನ್ನು ಮಾಡುವುದಾಗಿ ವಿಫುಲ್ ಅಮೃತ್ ಲಾಲ್ ಷಾ ಕಳೆದ ವರ್ಷ ಘೋಷಿಸಿದ್ದರು. ಈ ಚಿತ್ರದ ಕುರಿತು ಅಪ್ ಡೇಟ್ ದೊರೆತಿದ್ದು...

2007  ರಲ್ಲಿ ತೆರೆ ಕಂಡಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನ್ನು ಮಾಡುವುದಾಗಿ ವಿಫುಲ್ ಅಮೃತ್ ಲಾಲ್ ಷಾ ಕಳೆದ ವರ್ಷ ಘೋಷಿಸಿದ್ದರು. ಈ ಚಿತ್ರದ ಕುರಿತು ಅಪ್ ಡೇಟ್ ದೊರೆತಿದ್ದು, ಇತ್ತೀಚಿನ ವರದಿ ಪ್ರಕಾರ ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟಿಸಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. 
ಈ ಹಿಂದಿನ ಯೋಜನೆಯ ಪ್ರಕಾರ ಸೀಕ್ವೆಲ್ ಚಿತ್ರದಲ್ಲೂ ಅಕ್ಷಯ್ ಕುಮಾರ್ ನಟಿಸಬೇಕಿತ್ತು. ಆದರೆ ಅರ್ಜುನ್ ಕಪೂರ್ ಗೆ ಅವಕಾಶ ನೀಡಲಾಗಿದೆ. ಅಕ್ಷಯ್ ಕುಮಾರ್ ಅವರು ಬೇರೆ ಸಿನಿಮಾದಲ್ಲಿ ಕಾರ್ಯನಿರತರಾಗಿರುವುದರಿಂದ ಬೇರೆ ನಟರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅರ್ಜುನ್ ಕಪೂರ್ ನಟಿಸಲಿದ್ದು ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡದ ಮೂಲಗಳಿಂದ ತಿಳಿದುಬಂದಿದೆ. 
ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ಮಾಡುವುದರ ಬಗ್ಗೆ ವಿಫುಲ್ ಬಹಳ ಹಿಂದೆಯೇ ಘೋಷಿಸಿದ್ದರಾದರೂ ಕಾರಣಾಂತರಗಳಿಂದ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT