ಟ್ಯೂಬ್ ಲೈಟ್ 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ಸಲ್ಮಾನ್ 'ಟ್ಯೂಬ್‌ಲೈಟ್'

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿಯದ ಟ್ಯೂಬ್‌ಲೈಟ್ ಚಿತ್ರ ಗಲ್ಲಾ ಪಟ್ಟಿಗೆ ಧೂಳೆಬಿಸುವಲ್ಲಿ ಸೋತಿದೆ ಎಂದು ಬಾಲಿವುಡ್ ಪಂಡಿತರು ಅಭಿಪ್ರಾಯ...

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿಯದ ಟ್ಯೂಬ್‌ಲೈಟ್ ಚಿತ್ರ ಗಲ್ಲಾ ಪಟ್ಟಿಗೆ ಧೂಳೆಬಿಸುವಲ್ಲಿ ಸೋತಿದೆ ಎಂದು ಬಾಲಿವುಡ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಈ ಹಿಂದೆ ಸಲ್ಮಾನ್ ಅಭಿನಯದ ಭಜರಂಗಿ ಭಾಯಿಜಾನ್ ಮತ್ತು ಸುಲ್ತಾನ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬಿಸಿದ್ದವು. ಬಿಡುಗಡೆಯಾದ ಮೊದಲ ಐದು ದಿನದಲ್ಲೇ 100 ಕೋಟಿ ಕ್ಲಬ್ ಸೇರಿದ್ದವು. ಆದರೆ ಟ್ಯೂಬ್‌ಲೈಟ್ ಚಿತ್ರ ಸಹ ಈದ್ ಹಬ್ಬದಂದೆ ಬಿಡುಗಡೆಯಾಗಿದ್ದರು ಗಳಿಕೆಯಲ್ಲಿ ಸೋತಿದೆ ಎಂದು ಹೇಳಬಹುದು. 
ಟ್ಯೂಬ್‌ಲೈಟ್ ಚಿತ್ರ ಬಿಡುಗಡೆಯಾದ ಮೊದಲ ದಿನ 20.75 ಕೋಟಿ, ಎರಡನೇ ದಿನ 19.75 ಕೋಟಿ ಮತ್ತು ಮೂರನೇ ದಿನ 22.25 ಕೋಟಿ ಗಳಿಕೆ ಮಾಡಿತ್ತು. ಇನ್ನು ಈದ್ ಹಬ್ಬದ ಸೋಮವಾರ ಚಿತ್ರ 18.5 ಕೋಟಿ ಮಾತ್ರ ಗಳಿಕೆ ಮಾಡಿದೆ. ಇನ್ನು ಮಂಗಳವಾರ ಚಿತ್ರ 11.75 ಕೋಟಿ ಗಳಿಕೆ ಮಾಡಿದ್ದು ಒಟ್ಟಾರೆ ಐದು ದಿನಕ್ಕೆ 93 ಕೋಟಿ ರುಪಾಯಿ ಮಾತ್ರ ಗಳಿಕೆ ಮಾಡಿದೆ. 
ಸುಲ್ತಾನ್ ಚಿತ್ರ ಐದು ದಿನದಲ್ಲಿ 180.36 ಕೋಟಿ ಗಳಿಕೆ ಮಾಡಿತ್ತು. ಇನ್ನು ಸುಲ್ತಾನ್ ಚಿತ್ರ ವಿಶ್ವದಾದ್ಯಂತ 584 ಕೋಟಿ ರುಪಾಯಿ ಗಳಿಕೆ ಮಾಡಿತ್ತು. ಇನ್ನು 2015ರಲ್ಲಿ ಬಿಡುಗಡೆಯಾಗಿದ್ದ ಭಜರಂಗಿ ಭಾಯಿಜಾನ್ ಚಿತ್ರ ಒಟ್ಟಾರೆ 626 ಕೋಟಿ ರುಪಾಯಿ ಗಳಿಕೆ ಮಾಡಿತ್ತು. 
ಪ್ರಭಾಸ್ ಅಭಿನಯದ ಬಾಹುಬಲಿ 2 ಮತ್ತು ದಂಗಲ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಮಾಡಿದ್ದವು. ಈ ಚಿತ್ರ ಭಾರತೀಯ ಮಾರುಕಟ್ಟೆಯ ಅಗಾಧತೆಯನ್ನು ತೋರಿಸಿಕೊಟ್ಟಿದ್ದವು. ಇಂತಹ ಅಭೂತಪೂರ್ವ ಯಶಸ್ಸಿನ ಬಾಲಿವುಡ್ ಚಿತ್ರರಂಗದಲ್ಲಿ ಟ್ಯೂಬ್‌ಲೈಟ್ ಚಿತ್ರದ ಗಳಿಕೆ ಕಳಪೆ ಎನಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾರಿಂದ ಹೊಸ ಪಕ್ಷ ಸ್ಥಾಪನೆ; ರಾಮನಾಥಪುರಂನಲ್ಲಿ ಧ್ವಜ ಅನಾವರಣ

SCROLL FOR NEXT