ಕರಣ್ ಜೋಹರ್ 
ಬಾಲಿವುಡ್

ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾದ ಕರಣ್ ಜೋಹರ್

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ಕಾಫಿ ವಿತ್‌ ಕರಣ್ ಕಾರ್ಯಕ್ರಮದ ನಿರೂಪಕ ಕರಣ್‌ ಜೋಹರ್ ವಿವಾಹವಾಗದೇ ಎರಡು ಮಕ್ಕಳ...

ಮುಂಬಯಿ:  ಬಾಲಿವುಡ್‌ನ ಖ್ಯಾತ ನಿರ್ಮಾಪಕ, ಕಾಫಿ ವಿತ್‌ ಕರಣ್ ಕಾರ್ಯಕ್ರಮದ ನಿರೂಪಕ ಕರಣ್‌ ಜೋಹರ್ ವಿವಾಹವಾಗದೇ ಎರಡು ಮಕ್ಕಳ ತಂದೆಯಾಗಿದ್ದಾರೆ.

ಕರಣ್ ಜೋಹರ್‌ ಬಾಡಿಗೆ ತಾಯಿಯ ಮೂಲಕ ಮಗ ಮತ್ತು ಮಗಳನ್ನು ಪಡೆದಿದ್ದಾರೆ. ಕರಣ್ ತಮ್ಮ ಬುಕ್‌ನಲ್ಲಿ ತನಗೆ ಮಕ್ಕಳು ಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.

ಮಗಳಿಗೆ ರೂಹಿ ಎಂದು ಮಗನಿಗೆ ಯಶ್‌ ಅಂತ ಹೆಸರಿಡಲಾಗಿದೆ. ತಾನು ತಂದೆಯಾದ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಕರಣ್‌ ವೈದ್ಯಕೀಯ ವಿಜ್ಞಾನದ ಮೂಲಕ ತಂದೆಯಾಗಲು ಸಾಧ್ಯವಾಯಿತು ಎಂದಿದ್ದಾರೆ.

ನನ್ನ ಕುಟುಂಬಕ್ಕೆ ಇಬ್ಬರು ಮಕ್ಕಳು ಸೇರ್ಪಡೆಯಾಗಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತಸವಾಗುತ್ತಿದೆ. ನಾನು ತಂದೆಯಾಗಿದ್ದಕ್ಕೆ ನನಗೆ ಅತೀವ ಆನಂದವಾಗುತ್ತಿದೆ. ಔಷಧೀಯ ವಿಜ್ಞಾನದ ಸಹಾಯದಿಂದ ಎರಡು ಅಮೂಲ್ಯ ರತ್ನಗಳು ನನಗೆ ಸಿಕ್ಕಂತಾಗಿದೆ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.

ನನ್ನ ಜೀವನದಲ್ಲಿ ಎರಡು ಮಕ್ಕಳ ಆಗಮನದಿಂದಾಗಿ ನನ್ನ ಕೆಲಸ, ಓಡಾಟ ಮತ್ತು ಸಾಮಾಜಿಕ ಜವಾಬ್ದಾರಿಗಳಿಗೆ ಕೊಂಚ ಹಿನ್ನಡೆಯಾಗಲಿದೆ. ನಾನು ಅದಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದೇನೆ. ನನ್ನ ಜೀವಮಾನದ ಕನಸನ್ನು ನನಸಾಗಿಸಲು ನೆರವಾದ ಆ ಮಹಾ ತಾಯಿಗೆ ನಾನು ಚಿರ ಋಣಿಯಾಗಿರುತ್ತೇನೆ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ