ವಿದ್ಯಾಬಾಲನ್ 
ಬಾಲಿವುಡ್

ಬೇಗಮ್ ಜಾನ್ ಪಾತ್ರದಲ್ಲಿ ನಟನೆಗೆ ಮರಳಿದ ವಿದ್ಯಾಬಾಲನ್: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ವಿದ್ಯಾಬಾಲನ್ ನಟನೆಯ ಬೇಗಂ ಜಾನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ದೇಶ ವಿಭಜನೆಯ ಕಥೆಯುಳ್ಳ 'ಬೇಗಂ ಜಾನ್' ಬೆಂಗಾಲಿ ಚಿತ್ರ 'ರಾಜ್ ಕಹಿನಿ'ಯ ರಿಮೇಕ್ ಆಗಿದೆ.

ವಿದ್ಯಾಬಾಲನ್ ನಟನೆಯ ಬೇಗಂ ಜಾನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ದೇಶ ವಿಭಜನೆಯ ಕಥೆಯುಳ್ಳ 'ಬೇಗಂ ಜಾನ್' ಬೆಂಗಾಲಿ ಚಿತ್ರ 'ರಾಜ್ ಕಹಿನಿ'ಯ ರಿಮೇಕ್ ಆಗಿದೆ. 
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಸ್ವತಃ ವಿದ್ಯಾಬಾಲನ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ನಾನು ಬರುತ್ತಿದ್ದೇನೆ ( ಆ ರಹಿ ಹೂ ಮೇ) ಎಂದು ಟ್ವೀಟ್ ಮಾಡಿದ್ದಾರೆ. ಬೇಗಂ ಜಾನ್ ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದು ವಿಶೇಷ್ ಫಿಲಮ್ಸ್ ನಿರ್ಮಾಣ ಮಾಡಿದೆ. ಈ ಸಿನೆಮಾ ದೇಶ ವಿಭಜನೆಯಿಂದ ವೇಶ್ಯಾಗೃಹದ ಸ್ತ್ರೀಯರಿಗಾದ ತೊಂದರೆಗಳು ಮತ್ತು ಗಡಿ ಎಳೆದ ಮೇಲೆ ಅವರು ಸೇರಿದ ದೇಶಗಳಲ್ಲಿ ಅವರ ಮೇಲೆ ಉಂಟಾದ ಪರಿಣಾಮಗಳನ್ನು ಚರ್ಚಿಸುತ್ತದೆ. ಮೂಲ ಬೆಂಗಾಲಿ ಸಿನೆಮಾದಲ್ಲಿ ಬೇಗಂ ಜಾನ್ ಪಾತ್ರದಲ್ಲಿ ಖ್ಯಾತ ನಟಿ ರಿತುಪರ್ಣೊ ಸೇನಗುಪ್ತಾ ಕಾಣಿಸಿಕೊಂಡಿದ್ದರು. ಹಿಂದಿ ರಿಮೇಕ್ ನ ಚಿತ್ರದ ಈ ಪಾತ್ರದಲ್ಲಿ ವಿದ್ಯಾಬಾಲನ್ ನಟಿಸಿದ್ದಾರೆ. 
ಗೌಹರ್ ಖಾನ್, ಮಿಷ್ಠಿ ಚಕ್ರವರ್ತಿ, ನಾಸಿರುದ್ದೀನ್ ಶಾ, ಚಂಕಿ ಪಾಂಡೆ, ಪಲ್ಲವಿ ಶಾರ್ದಾ, ಇಳಾ ಅರುಣ್ ಚಿತ್ರದಲ್ಲಿದ್ದು ಏ.14 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!