ಆಲಿಯಾ ಭಟ್ 
ಬಾಲಿವುಡ್

ಪುರುಷ ನಿಂದನೆಯೇ ಸ್ತ್ರೀವಾದವಲ್ಲ : ಆಲಿಯಾ ಭಟ್

ಸ್ತ್ರೀವಾದ ಲಿಂಗ ಸಮಾನತೆಗೆ ಕರೆ ನೀಡುತ್ತದೆ ಆದರೆ ಜನರು ಇದನ್ನು ತಪ್ಪಾಗಿ ಅರ್ಥಮಾಡಿಕೊಂಡು ಪುರುಷ ನಿಂದನೆಯಲ್ಲೇ ಅಂತ್ಯಗೊಳಿಸುತ್ತಾರೆ ಎಂದು ಆಲಿಯಾ ಭಟ್ ಹೇಳಿದ್ದಾರೆ.

ನವದೆಹಲಿ: ಸ್ತ್ರೀವಾದ ಲಿಂಗ ಸಮಾನತೆಗೆ ಕರೆ ನೀಡುತ್ತದೆ ಆದರೆ ಜನರು ಇದನ್ನು ತಪ್ಪಾಗಿ ಅರ್ಥಮಾಡಿಕೊಂಡು ಪುರುಷ ನಿಂದನೆಯಲ್ಲೇ ಅಂತ್ಯಗೊಳಿಸುತ್ತಾರೆ ಎಂದು ಆಲಿಯಾ ಭಟ್ ಹೇಳಿದ್ದಾರೆ. 
ಮಹಿಳೆಗೆ ವಿಶೇಷ ಉಪಚಾರವನ್ನು ಸ್ತ್ರೀವಾದ ಕೇಳುವುದಿಲ್ಲ. ಕೇವಲ ಹೆಣ್ಣು ಮಕ್ಕಳು ಮಾತ್ರ ಸ್ತ್ರೀವಾದಿಗಳಾಗಿರಬೇಕೆಂದೇನೂ ಇಲ್ಲ.  ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ತೋರುವ ಪುರುಷರೂ ಸಹ ಸ್ತ್ರೀ ಪರ ಧ್ವನಿಯಾಗಬಲ್ಲರು. ಸ್ತ್ರೀವಾದವೆಂದರೆ ಸಮಾನತೆ ಹಾಗೂ ಸಮಾನತೆಯನ್ನು ಎಲ್ಲರೂ ನಂಬುತ್ತಾರೆ. ಆದರೆ ಸಾಮಾನ್ಯವಾಗಿ ಸ್ತ್ರೀವಾದವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಪುರುಷ ನಿಂದನೆಯನ್ನು ಮಾಡಲಾಗುತ್ತದೆ ಎಂದು ಆಲಿಯಾ ಭಟ್ ಅಭಿಪ್ರಾಯಪಟ್ಟಿದ್ದಾರೆ. 
"ಪುರುಷರಿಗಿಂತ ಮಹಿಳೆಯರು ಶ್ರೇಷ್ಠ ಎಂದು ಹೇಳುತ್ತಿಲ್ಲ. ಹಾಗೆ ಹೇಳುವುದು ಸೂಕ್ತ ಎಂಬ ನಂಬಿಕೆ ಇಲ್ಲ. ಪುರುಷರು, ಮಹಿಳೆಯರು ಇಬ್ಬರಿಗೂ ಸಮಾನತೆ ಇರಬೇಕು. ನಾನು ಮಹಿಳಾ ಹಕ್ಕುಗಳ ಅಭಿಯಾನದ ಭಾಗವಾಗಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಸ್ತ್ರೀವಾದಿಯಲ್ಲ ಎಂಬ ಅರ್ಥ ಕಲ್ಪಿಸಬೇಕಿಲ್ಲ". ಎಂದಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಈಗಾಗಲೇ ಸಾಕಷ್ಟು ಮಾತನಾಡಲಾಗಿದೆ. ಸಮಾನತೆ ಎಂಬುದು ಮಹಿಳೆಯರ ಜನ್ಮಸಿದ್ಧ ಹಕ್ಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಲಿಯಾ ಭಟ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ