ಚಂಡೀಗಢ: ಮಾ.15, ಬಾಲಿವುಡ್ ನಟ ಅಮೀರ್ ಖಾನ್ ಅವರ 52 ನೇ ಜನ್ಮ ದಿನಾಚರಣೆಯಾಗಿದ್ದು, ಸಂಭ್ರಮಾಚರಣೆಯಲ್ಲಿ ಹರ್ಯಾಣ ಮೂಲದ ಪೊಗಟ್ ಕುಟುಂಬ ಭಾಗವಹಿಸಲಿದೆ.
ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಹರ್ಯಾಣ ಮೂಲದ ಪೊಗಟ್ ಕುಟುಂಬದ ನೈಜ ಕಥೆಯನ್ನಾಧರಿಸಿದ ಸಿನಿಮಾ ಆಗಿದ್ದು, ಪೊಗಟ್ ಕುಟುಂಬ ಮುಂಬೈ ನಲ್ಲಿ ನಡೆಯಲಿರುವ ಅಮೀರ್ ಖಾನ್ ಜನ್ಮದಿನಾಚರಣೆಯಲ್ಲಿ ಭಾಗಿಯಾಗಲಿದೆ.
"ಹೌದು ನಮಗೆ ಆಹ್ವಾನ ಬಂದಿದ್ದು, ಮುಂಬೈ ಗೆ ತೆರಳುತ್ತಿದ್ದೇವೆ ಎಂದು ಕುಸ್ತಿ ಚಾಂಪಿಯನ್ ಬಬಿತಾ ಪೊಗಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗೀತಾ, ಬಬಿತಾ ಪೊಗಟ್ ಹಾಗೂ ಅವರ ತಂದೆ ಮಹಾವೀರ್ ಪೊಗಟ್ ಜೀವನಾಧಾರಿತ ಸಿನಿಮಾ ದಂಗಲ್ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು.