ಶಾರೂಕ್ ಖಾನ್ ತಮ್ಮ ಕುಟುಂಬದವರೊಂದಿಗೆ 
ಬಾಲಿವುಡ್

ಮಕ್ಕಳಿಗಾಗಿ ಧೂಮಪಾನ, ಮದ್ಯಪಾನ ಸೇವನೆ ಬಿಡಲು ಯೋಚಿಸಿರುವ ಶಾರೂಕ್ ಖಾನ್

ಮೂವರು ಮಕ್ಕಳ ತಂದೆಯಾಗಿರುವ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಗೆ ಇದೀಗ ನಡು ಹರೆಯ...

ಮುಂಬೈ: ಮೂವರು ಮಕ್ಕಳ ತಂದೆಯಾಗಿರುವ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಗೆ ಇದೀಗ ನಡು ಹರೆಯ. 50ರ ಹೊಸ್ತಿಲಿನಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಬರುವುದು ಸಹಜ. ಅದೇ ರೀತಿ ಶಾರೂಕ್ ಖಾನ್ ಕೂಡ ಇನ್ನು ಮುಂದೆ ಆರೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ಸಮಯವನ್ನು ಮಕ್ಕಳಿಗೆ ಮೀಸಲಿಡಲು ನಿರ್ಧರಿಸಿದ್ದಾರಂತೆ. ಅದಕ್ಕಾಗಿ ಧೂಮಪಾನ, ಮದ್ಯಪಾನ ಸೇವನೆ ಅಭ್ಯಾಸವನ್ನು ಬಿಡಲು ಮನಸ್ಸು ತೋರಿದ್ದಾರಂತೆ.
ಮುಂಬೈನಲ್ಲಿ ನಿನ್ನೆ ನಡೆದ ಇಂಡಿಯಾ ಟುಡೇ ಸಮಾರಂಭದಲ್ಲಿ ಭಾಗವಹಿಸಿ ಅವರು ಹೀಗೆ ಮಾತನಾಡಿದರು. ಅವರ ಮೂರನೇ ಮಗು ಅಬ್ ರಾಂಗೆ ಈಗ ಕೇವಲ 4 ವರ್ಷ. 50ರ ಹರೆಯದ ನಿಮಗೆ ಅಷ್ಟು ಪುಟ್ಟ ಮಗುವಿನ ಜೊತೆ ಸಮಯ ಕಳೆಯಲು ಆಗುತ್ತದೆಯೇ ಎಂದು ಕೇಳಿದ್ದಕ್ಕೆ, ಹೌದು, ಈ 50ರ ವಯಸ್ಸಿನಲ್ಲಿ 4 ವರ್ಷ ಪ್ರಾಯದ ಮಗನಿದ್ದಾನೆ. ಅವನ ಕಾಳಜಿ ಅತಿ ಮುಖ್ಯ. ಆಲೋಚನೆ ನನ್ನ ತಲೆಯಲ್ಲಿಯೂ ಬಂದಿದೆ. ಮಕ್ಕಳ ಬಗ್ಗೆ ಕಾಳಜಿ ವಹಿಸಲು ನಾನು ಆರೋಗ್ಯಯುತ ಜೀವನಶೈಲಿ ನಡೆಸುವುದು ಮುಖ್ಯ. ಒಂದೆಡೆ 50 ವರ್ಷದಲ್ಲಿ ಕೂಡ ನನಗೆ ಅಷ್ಟು ಪುಟ್ಟ ಮಗನಿದ್ದಾನೆ ಎಂದು ಹೇಳಿಕೊಳ್ಳಲು ನನಗೆ ಖುಷಿಯಾಗುತ್ತಿದೆ. ನಾನು ಇನ್ನೂ ಲವಲವಿಕೆಯಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ. ಮುಗ್ಧತೆ ಮತ್ತು ಪ್ರೀತಿಯನ್ನು ಬೇರೆ ದೃಷ್ಟಿಯಿಂದ ನೋಡಲು ಕಾರಣವಾಗಿದೆ ಎಂದರು. ಮುಂದಿನ ನನ್ನ 20-25 ವರ್ಷದ ಜೀವನವನ್ನು ಮಕ್ಕಳಿಗಾಗಿ ಮೀಸಲಿಡಲು ಯೋಚಿಸಿದ್ದೇನೆ. ಅದಕ್ಕೆ ನಾನು ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಬೇಕು ಎನ್ನುತ್ತಾರೆ.
ನನ್ನ ದೊಡ್ಡ ಮಕ್ಕಳಿಗೆ ನೀಡಿದ ಸಮಯ, ಕಾಳಜಿಯನ್ನೂ ಚಿಕ್ಕ ಮಗನಿಗೆ ನೀಡಲು ಸಾಧ್ಯವಾಗುತ್ತದೋ ಇಲ್ಲವೊ ಎಂಬ ಗಾಬರಿಯಾಗುತ್ತಿದೆ. ಅದಕ್ಕಾಗಿ ಆರೋಗ್ಯಯುತ, ಸಂತೋಷ ಜೀವನವನ್ನು ನಡೆಸುವುದು ನನಗೆ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾರೂಕ್ ಖಾನ್ 15 ವರ್ಷದವರಿದ್ದಾಗಲೇ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ಅದೇ ಪರಿಸ್ಥಿತಿ ತಮ್ಮ ಮಕ್ಕಳಿಗೂ ಬರಬಾರದು ಎಂಬುದು ಅವರ ಆಶಯ. ಮಕ್ಕಳ ಜೊತೆ ಅನೇಕ ವರ್ಷಗಳ ಕಾಲ ಜೀವನ ನಡೆಸಬೇಕೆಂದು ಅವರು ಬಯಸುತ್ತಿದ್ದಾರೆ. ಮಕ್ಕಳಿಗೆ ಸಲಹೆ ನೀಡುವ ಮುನ್ನ ನಾನು ಮಾದರಿಯಾಗಿರಬೇಕೆಂದು ಬಯಸುತ್ತೇನೆ ಎಂದು ಹೇಳುತ್ತಾರೆ.
ನನ್ನಲ್ಲಿ ಯುವಕರ ಪ್ರಾಯದ ಉತ್ಸಾಹ ಉಳಿಯಲು ಯುವತಿಯರ ಜೊತೆ ನಟಿಸುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಬೇಸರ, ಸಮಸ್ಯೆಯಿಲ್ಲ. ಆದರೆ ಇನ್ನೂ ಚೈತನ್ಯ, ಉತ್ಸಾಹ ಉಳಿಯಲು ನಾನು ನನಗಿಂತ ಚಿಕ್ಕ ವಯಸ್ಸಿನವರ ಜೊತೆ ಕೆಲಸ ಮಾಡಲು ಬಯಸುತ್ತೇನೆ ಎಂದು ಶಾರೂಕ್ ಖಾನ್ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್