ಮುಂಬೈಯಲ್ಲೊಲಿ ನಡೆದ ಲೊ ಒರಿಯಲ್ ಪ್ಯಾರಿಸ್ ಕಲೆಕ್ಷನ್ 2017 ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ 
ಬಾಲಿವುಡ್

ಪ್ರಿಯಾಂಕ ಎಂದು ಕರೆದಿದ್ದಕ್ಕೆ ದೀಪಿಕಾ ಅಸಮಾಧಾನ; ಇದು ಅವರ ಅಜ್ಞಾನ ಎಂದ ನಟಿ

ಅಮೆರಿಕಾದಲ್ಲಿ ಹಲವು ಬಾರಿ ವಿದೇಶಿ ಮಾಧ್ಯಮಗಳಿಂದ ಪ್ರಿಯಾಂಕಾ ಚೋಪ್ರಾ ಎಂದು ತಪ್ಪಾಗಿ...

ನವದೆಹಲಿ: ಅಮೆರಿಕಾದಲ್ಲಿ ಹಲವು ಬಾರಿ ವಿದೇಶಿ ಮಾಧ್ಯಮಗಳಿಂದ ಪ್ರಿಯಾಂಕಾ ಚೋಪ್ರಾ ಎಂದು ತಪ್ಪಾಗಿ ಕರೆಸಿಕೊಂಡ ದೀಪಿಕಾ ಪಡುಕೋಣೆ,  ಒಂದೇ ಬಣ್ಣದ ಜನರನ್ನು ಅದೇ ವ್ಯಕ್ತಿ ಎಂದು ಭಾವಿಸುವುದು ಜನರಲ್ಲಿರುವ ಅಜ್ಞಾನ ಮತ್ತು ಜನಾಂಗೀಯ ನಿಂದನೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಅಮೆರಿಕಾದ ವಿಮಾನ ನಿಲ್ದಾಣವೊಂದರಿಂದ ಹೊರಬರುತ್ತಿದ್ದ ದೀಪಿಕಾರನ್ನು ವಿದೇಶಿ ಮಾಧ್ಯಮಗಳ ಛಾಯಾಗ್ರಾಹಕರು ಒಂದೇ ಸಮನೆ ಪ್ರಿಯಾಂಕಾ, ಪ್ರಿಯಾಂಕಾ ಎಂದು ಕರೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 
ಕಳೆದ ವರ್ಷ ವಿನ್ ಡೀಸೆಲ್ ಜೊತೆಗೆ ಎಕ್ಸ್ ಎಕ್ಸ್ ಎಕ್ಸ್: ರಿಟರ್ನ್ ಆಫ್ ಕ್ಸೇಂಡರ್ ಕೇಜ್ ಚಿತ್ರದ ಮೂಲಕ ಹಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ದೀಪಿಕಾ, ಈ ಗುರುತಿಸಿಕೊಳ್ಳುವ ಸಮಸ್ಯೆ ಬಗ್ಗೆ ಬಲವಾದ ಅಭಿಪ್ರಾಯ ಹೊಂದಿದ್ದಾರೆ. ಭಾರತೀಯ ಮಾಧ್ಯಮಗಳು ಈ ವಿಷಯದಲ್ಲಿ ಪ್ರಭುತ್ವವಾಗಿ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಗಾಸಿಪ್ ಸುದ್ದಿ ಹಬ್ಬಿಸುವ  ಬದಲು ಜನರನ್ನು ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದಿದ್ದಾರೆ.
ಮುಂಬೈಯಿಂದ ಐಎಎನ್ಎಸ್ ಸುದ್ದಿ ಸಂಸ್ಥೆಗೆ ದೂರವಾಣಿ ಮೂಲಕ ಮಾತನಾಡಿದ ಅವರು, ನನ್ನ ಪ್ರಕಾರ ಇದು ಜನಾಂಗೀಯ ನಿಂದನೆ ಮತ್ತು ಅಜ್ಞಾನ. ಭಾರತೀಯ ಮಾಧ್ಯಮಗಳು ಕೂಡ ಈ ಬಗ್ಗೆ ಅತ್ಯಂತ ಖುಷಿ ಪಡಬಾರದು. ಒಂದೇ ಬಣ್ಣ ಹೊಂದಿದ್ದಾರೆ ಎಂಬ ಮಾತ್ರಕ್ಕೆ ಇಬ್ಬರು ವ್ಯಕ್ತಿಗಳು ಒಬ್ಬರಾಗಲು ಸಾಧ್ಯವಿಲ್ಲ ಎಂದರು.
ಫ್ಯಾಶನ್ ಉತ್ಸವ ಮೆಟ್ ಗಾಲಾ 2017ನ್ನು ಮುಗಿಸಿ ಬಂದಿರುವ ದೀಪಿಕಾ, ಫ್ರೆಂಚ್ ರಿವಿಯರಾದಲ್ಲಿ ಮೇ 17 ಮತ್ತು 18ರಂದು ನಡೆಯುವ ಪ್ರತಿಷ್ಠಿತ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲಂಕಾರಿಕ ವಸ್ತು ಲೊ ಒರಿಯಲ್ ಪ್ಯಾರಿಸ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರು ಕ್ಯಾನ್ಸೆಯಲ್ಲಿ ಈ ಹಿಂದೆ 2010ರಲ್ಲಿ ಬೇರೊಂದು ವಸ್ತುವಿನ ರಾಯಭಾರಿಯಾಗಿ ಭಾಗವಹಿಸಿದ್ದರು.
ಮೆಟ್ ಗಾಲಾದಲ್ಲಿ ಅವರು ಕಳೆದ ವಾರ ಧರಿಸಿದ್ದ ಉಡುಪಿಗೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಕೇಳಿಬಂದಿರಲಿಲ್ಲ. ಆ ಬಗ್ಗೆ ದೀಪಿಕಾ ತಲೆಕೆಡಿಸಿಕೊಳ್ಳುವುದೂ ಇಲ್ಲ. ಕೆಲವೊಮ್ಮೆ ವೀಕ್ಷಕರಿಗೆ ಇಷ್ಟವಾಗಬಹುದು, ಅಥವಾ ಆಗದೇ ಇರಬಹುದು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮುಖ್ಯ ಉದ್ದೇಶ ಮನರಂಜನೆ ಎನ್ನುತ್ತಾರೆ ದೀಪಿಕಾ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT