ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಬಾಲಿವುಡ್ ನಟಿ ಐಶ್ವರ್ಯ ರೈ ಜತೆ ಮುಂದಿನ ಚಿತ್ರವನ್ನು ಮಾಡಲಿದ್ದು ಹಿಂದಿ ಮತ್ತು ತಮಿಳಿನಲ್ಲಿ ಚಿತ್ರ ಸೆಟ್ಟೇರಲಿದೆ ಎಂಬ ವದಂತಿಗಳು ಹರಿದಾಡುತ್ತಿದೆ.
ತಮ್ಮ ಮುಂದಿನ ಚಿತ್ರಕ್ಕಾಗಿ ಮಣಿರತ್ನಂ ಅವರು ಐಶ್ವರ್ಯ ರೈ ಬಚ್ಚನ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದ್ದು ಮುಂದಿನ ದಿನಗಳಲ್ಲಿ ಅಧಿಕೃತ ಸುದ್ದಿ ಹೊರಬೀಳಲಿದೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಸಹ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು ಅಧಿಕೃತ ಮಾಹಿತಿ ಇಲ್ಲ.
ಅದಿತಿ ರಾವ್ ಹೈದರಿ ಅವರು ಈ ಹಿಂದಿನ ಮಣಿರತ್ನಂ ಚಿತ್ರ ಕಾಟ್ರು ವೆಳಿಯಿದೈ ಚಿತ್ರದಲ್ಲಿ ನಟಿಸಿದ್ದಾರೆ. ಕಾಟ್ರು ವೆಳಿಯಿದೈ ಚಿತ್ರದ ಕುರಿತಂತೆ ಸಂದರ್ಶನವೊಂದರಲ್ಲಿ ಅದಿತಿ ಮಾಂತ್ರಿಕ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಸಂತೋಷದ ವಿಷಯ ಅವರು ಬೆಳ್ಳಿತೆರೆ ಮೇಲೆ ಜಾದೂ ಮಾಡುತ್ತಾರೆ ಎಂದು ಹೇಳಿದ್ದರು.