ಮುಂಬೈ: ಸಂಚಾರಿ ನಿಯಮ ಉಲ್ಲಂಘಿಸಿ ನಡು ನಡುರಸ್ತೆಯಲ್ಲೇ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಬಾಲಿವುಡ್ ನಟ ವರುಣ್ ಧವನ್ ಅವರಿಗೆ ಮುಂಬೈ ಪೊಲೀಸರು ಗುರುವಾರ ದಂಡ ಕಟ್ಟುವಂತೆ ಇ-ಚಲನ್ ನೀಡಿದ್ದಾರೆ.
ಪ್ರಮುಖ ದಿನಪತ್ರಿಕೆಯೊಂದು ವರುಣ್ ಧವನ್ ಅವರು ನಡು ರಸ್ತೆಯಲ್ಲೇ ಅಭಿಮಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರ ಪ್ರಕಟಿಸಿದ್ದನ್ನು ಆಧರಿಸಿ ಮುಂಬೈ ಪೊಲೀಸರು ಬಾಲಿವುಡ್ ನಟನಿಗೆ ಇ-ಚಲನ್ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ವರುಣ್ ಧವನ್ ಎಚ್ಚರಿಕೆಯನ್ನೂ ನೀಡಿದ್ದು, ಇಂತಹ ಘಟನೆ ಮರು ಕಳುಹಿಸದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ನಡುರಸ್ತೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಜೀವಕ್ಕೆ ಅಪಾಯ. ಈ ರೀತಿಯ ಸ್ಟಂಟ್ ಪರದೆ ಮೇಲೆ ನಡೆಯುತ್ತದೆ. ನಿಜ ಜೀವನದಲ್ಲಿ ಅಲ್ಲ. ನಿಮ್ಮಂತಹವರು ಇನ್ನೊಬ್ಬರಿಗೆ ಮಾದರಿಯಾಗಬೇಕು. ಯೂತ್ ಐಕಾನ್ ಎನ್ನಿಸಿಕೊಂಡಿರುವ ನೀವು ಯುವಕರಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಆಟೋರಿಕ್ಷಾದಲ್ಲಿ ಕುಳಿತಿದ್ದ ಮಹಿಳಾ ಅಭಿಮಾನಿಯೊಬ್ಬರು ವರುಣ್ ಕಾಣಿಸಿದ ಕೂಡಲೆ ಅವರ ಕಾರಿನ ಪಕ್ಕದಲ್ಲೇ ಆಟೋ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಕಾರಿನಿಂದ ವರುಣ್, ಆಟೋದಿಂದ ಮಹಿಳಾ ಅಭಿಮಾನಿ ಬಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಅವರು ಟ್ವೀಟ್ ಮಾಡಿದ್ದರು.
ಈ ರೀತಿ ಮಾಡಿದ್ದು ತಪ್ಪಾಯಿತು ಎಂದು ವರುಣ್ ಧವನ್ ಪೊಲೀಸರ ಕ್ಷಮೆಯಾಚಿಸಿದ್ದಾರೆ. ಕಾರು ಚಲಿಸುತ್ತಿರಲಿಲ್ಲ. ನಾವು ಟ್ರಾಫಿಕ್‌ನಲ್ಲಿದ್ದೆವು. ಹಾಗಾಗಿ ಸೆಲ್ಫಿ ತಗೊಂಡೆ. ಅಭಿಮಾನಿಯನ್ನು ನಿರಾಸೆಪಡಿಸಬಾರದು ಎಂಬ ಉದ್ದೇಶದಿಂದ ಸೆಲ್ಫಿ ತಗೊಂಡೆ ಹೊರತು ಇನ್ನೇನು ಇಲ್ಲ ಎಂದು ವರುಣ್ ಸ್ಪಷ್ಟೀಕರಣ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics