ಬ್ರಿಟನ್ ನಲ್ಲಿ 'ಪದ್ಮಾವತಿ' ಬಿಡುಗಡೆಗೆ ಬ್ರಿಟೀಷ್ ಸೆನ್ಸಾರ್ ಮಂಡಳಿ ಅಸ್ತು 
ಬಾಲಿವುಡ್

ಬ್ರಿಟನ್ ನಲ್ಲಿ 'ಪದ್ಮಾವತಿ' ಬಿಡುಗಡೆಗೆ ಬ್ರಿಟಿಷ್ ಸೆನ್ಸಾರ್ ಮಂಡಳಿ ಅಸ್ತು

'ಪದ್ಮಾವತಿ' ಚಿತ್ರ ವಿವಾದದಿಂದಾಗಿ ಭಾರತದಲ್ಲಿ ಚಲನಚಿತ್ರದ ಬಿಡುಗಡೆ ಮುಂದೂಡಿದ್ದರೂ, ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (ಬಿಬಿಎಫ್ ಸಿ) ಬ್ರಿಟನ್ ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.

ಲಂದನ್: 'ಪದ್ಮಾವತಿ' ಚಿತ್ರ ವಿವಾದದಿಂದಾಗಿ ಭಾರತದಲ್ಲಿ ಚಲನಚಿತ್ರದ ಬಿಡುಗಡೆ ಮುಂದೂಡಿದ್ದರೂ, ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (ಬಿಬಿಎಫ್ ಸಿ) ಬ್ರಿಟನ್ ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಬಿಬಿಎಫ್ ಸಿ ಭಾರತೀಯ ಚಿತ್ರಕ್ಕೆ 12A ಸರ್ಟಿಫಿಕೇಟ್ ನೀಡಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ  'ಪದ್ಮಾವತಿ' ಬ್ರಿಟನ್ ನಲ್ಲಿ ಡಿಸೆಂಬರ್ 1 ರಂದು ಬಿಡುಗಡೆಯಾಗಲು ಅಲ್ಲಿನ ಸೆನ್ಸಾರ್ ಸಮಿತಿ  ಅನುಮೋದನೆ ನೀಡಿದೆ.
ಬಿಬಿಎಫ್ ಸಿ ಜಾಲತಾಣದ ಮಾಹಿತಿಯಂತೆ 'ಪದ್ಮಾವತಿ' ಚಿತ್ರದ ಯಾವ ದೃಶ್ಯಕ್ಕೂ ಕತ್ತರಿ ಹಾಕದೆ ಪೂರ್ಣ ಚಿತ್ರವನ್ನು ಪ್ರದರ್ಶಿಸಲು ಆನುಮತಿ ದೊರಕಿದೆ.
ಇದೇ ವೇಳೆ ಭಾರತದಲ್ಲಿ ಡಿ.1ರಂದು ಬಿಡುಗಡೆಗೊಳ್ಳಬೇಕಿದ್ದ 'ಪದ್ಮಾವತಿ' ಚಿತ್ರಕ್ಕೆ ಸಿಬಿಎಫ್ಸಿ ಇದುವರೆಗೆ  ಸೆನ್ಸಾರ್‌ ಸರ್ಟಿಫಿಕೇಟ್‌ ನೀಡಿಲ್ಲ. ಸೆನ್ಸಾರ್‌ ಮಂಡಳಿ ಸದಸ್ಯರು ಈ ಚಿತ್ರವನ್ನಿನ್ನೂ ವಿಕ್ಷಿಸಿಲ್ಲ, ಇನ್ನು ಒಂದು ವೇಳೆ ಸೆನ್ಸಾರ್ ಸರ್ಟಿಫಿಕೇಟ್ ನೀಡಿದರೂ ಸಹ  ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ರಜಪೂತ್‌ ಸಂಘಟನೆಗಳು ಹೇಳಿದೆ.
ಹೀಗಿದ್ದರೂ , ವಿಯಾಕಾನ್ 18 ಮೂಲದ ಪ್ರಕಾರ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್ ಸಿ) ನಿಂದ ಅನುಮತಿ ದೊರಕದೆ ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರ ಪ್ರದರ್ಶಿಸಲಾಗುವುದಿಲ್ಲ ಎಂದು ಹೇಳಿದೆ.

ಏತನ್ಮದ್ಯೆ 'ಪದ್ಮಾವತಿ' ಚಿತ್ರದ ವಿವಾದ ಕುರಿತಂತೆ ಮನವಿಯನ್ನು ಆಲಿಸಲು ಒಪ್ಪಿರುವ ಸುಪ್ರೀಂ ಕೋರ್ಟ್ ನ.28ರಂದು ಈ ಸಂಬಂಧ ವಿಚಾರಣೆ ಕೈಗೆತ್ತಿಕೊಳ್ಳಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ