ಮುಂಬೈ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಯೋಪಿಕ್ ಅನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡಲು ಅಮೆರಿಕ ಮಿಡಿಯಾ ಕಂಪನಿ ವೈಸ್ ರೆಡಿಯಾಗಿದೆ.
ಆ್ಯನ್ ಇನ್‌ಸಿಗ್ನಿಫಿಕ್ಯಾಂಟ್ ಮ್ಯಾನ್(ಅಮಾಯಕ ವ್ಯಕ್ತಿ) ಎಂದು ಶೀರ್ಷಿಕೆಯ ಡಾಕ್ಯುಮೆಂಟರಿ ಕುಶ್ಬೂ ರನ್ಕಾ ಮತ್ತು ವಿಜಯ್ ಶುಕ್ಲಾ ಎಂಬುವರು ನಿರ್ದೇಶಿಸಿದ್ದರು. ಇನ್ನು ಚಿತ್ರವನ್ನು ಆನಂದ್ ಗಾಂಧಿ ಎಂಬುವರು ನಿರ್ಮಿಸಿದ್ದರು. ಸಾಮಾಜಿಕ ಕಾರ್ಯಕರ್ತನಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ರಾಜಕಾರಣಿಯಾಗಿ ಬದಲಾಗುವ ಕುರಿತ ಚಿತ್ರ ಇದಾಗಿದೆ.
ನಿರ್ಮಾಪಕ ಆನಂದ್ ಗಾಂಧಿ ಜತೆ ಸೇರಿ ಚಿತ್ರವನ್ನು ಭಾರತ ಮತ್ತು ವಿದೇಶಗಳಲ್ಲಿ ಬಿಡುಗಡೆ ಮಾಡಲು ನಾವು ಸಿದ್ಧರಾಗಿದ್ದೇವೆ ಎಂದು ವೈಸ್ ಡಾಕ್ಯುಮೆಂಟರಿ ಫಿಲ್ಮಿಸ್ ಸಂಸ್ಧೆಯ ಕಾರ್ಯನಿರ್ವಾಹಕ ನಿರ್ಮಾಪಕ ಜೋಸನ್ ಮೊಜಿಕಾ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಚಿತ್ರವನ್ನು 2016ರ ಟೊರಂಟೊ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜೋಸನ್ ಮೊಜಿಕಾ ಅವರು ವೀಕ್ಷಿಸಿದ್ದರಂತೆ. ಮಾರ್ಷಲ್ ಕರ್ರಿ ಅವರ ಸ್ಟ್ರೀಟ್ ಫೈಟ್ ನಂತರ ನಾನು ಕಂಡ ರಸ್ತೆ ಮಟ್ಟದ ರಾಜಕೀಯ ವ್ಯಕ್ತಿಯೊಬ್ಬನ ಅದ್ಭುತ ಡಾಕ್ಯುಮೆಂಟರಿ ಇದಾಗಿದೆ ಎಂದರು.
ಇನ್ನು ಚಿತ್ರದ ಬಿಡುಗಡೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷಿತ್ ಮತ್ತು ಕೇಜ್ರಿವಾಲ್ ಅವರ ಆಕ್ಷೇಪಣೆ ಇಲ್ಲದೆ ಇದ್ದರೆ ಚಿತ್ರವನ್ನು ಬಿಡುಗಡೆ ಮಾಡಬಹುದು ಎಂದು ಈ ಹಿಂದೆ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿದ್ದ ಪಹ್ಲಜ್ ನಿಹಲಾನಿ ಅವರು ಹೇಳಿದ್ದರು.