ಹಾಂಕ್ ಕಾಂಗ್: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ, ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಮೇಣದ ಪ್ರತಿಮೆಗಳಿರುವ ಹಾಂಕ್ ಕಾಂಗ್ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ನಲ್ಲಿ ಇದೀಗ ಬಾಲಿವುಡ್ ನಟ ವರುಣ್ ಧವನ್ ಅವರು ನೂತನವಾಗಿ ಸೇರ್ಪಡೆಗೊಂಡಿವೆ.
2018ರಲ್ಲಿ ವರುಣ್ ಧವನ್ ಅವರ ಮೇಣದ ಪ್ರತಿಮೆಯನ್ನು ಮೇಡಮ್ ಟುಸ್ಸಾಡ್ಸ್ ನಲ್ಲಿ ಅನಾವರಣ ಮಾಡಲಾಗುತ್ತದೆ. ಇನ್ನು ತಮ್ಮ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಿರುವುದಕ್ಕೆ ವರುಣ್ ಧವನ್ ತಮ್ಮ ಟ್ವೀಟರ್ ಖಾತೆಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
2012ರಲ್ಲಿ ಬಿಡುಗಡೆಯಾದ ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ವರುಣ್ ಧವನ್ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ನಂತರ ಹಂಪ್ಟಿ ಶರ್ಮಾ ಕಿ ದುಲ್ಹನ್, ಎಬಿಸಿಡಿ 2, ಮೈನ್ ತೆರಾ ಹಿರೋ, ಬಧ್ರಿನಾಥ್ ಕಿ ದುಲ್ಹನ್ ಹಾಗೂ ಇತ್ತೀಚೆಗೆ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಜುಡ್ವಾ 2 ಚಿತ್ರದಲ್ಲಿ ಅಭಿನಯಿಸಿದ್ದಾರೆ.