ಮಂಗಳೂರು ಬೆಡಗಿ ಐಶ್ವರ್ಯ ರೈ ಬಚ್ಚನ್ ಗೆ 44ನೇ ಜನ್ಮ ದಿನದ ಸಂಭ್ರಮ 
ಬಾಲಿವುಡ್

ಮಂಗಳೂರು ಬೆಡಗಿ ಐಶ್ವರ್ಯ ರೈ ಬಚ್ಚನ್ ಗೆ 44ನೇ ಜನ್ಮ ದಿನದ ಸಂಭ್ರಮ

ಮಂಗಳೂರಿನ ಬೆಡಗಿ, ಬಾಲಿವುಡ್ ತಾರೆ, ಮಾಜಿ ವಿಶ್ವಸುಂದರಿಯಾದ ಐಶ್ವರ್ಯಾ ರೈ ಬಚ್ಚನ್ ಇಂದು 44ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಮುಂಬೈ: ಮಂಗಳೂರಿನ ಬೆಡಗಿ, ಬಾಲಿವುಡ್ ತಾರೆ, ಮಾಜಿ ವಿಶ್ವಸುಂದರಿಯಾದ ಐಶ್ವರ್ಯಾ ರೈ ಬಚ್ಚನ್ ಇಂದು 44ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ತಂದೆ ಕೃಷ್ಣ ರಾಜ್ ರೈ ನಿಧನರಾದ ಹಿನ್ನೆಲೆಯಲ್ಲಿ ಐಶ್ವರ್ಯ ಈ ಬಾರಿ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎನ್ನಲಾಗಿದೆ.
ಇಂದು ಇಡೀ ದಿನವನ್ನು ಐಶ್ವರ್ಯ ತಮ್ಮ ತಾಯಿ ಹಾಗೂ ಕುಟುಂಬದವರೊದನೆ ಕಳೆಯಲಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಪತಿ ಅಭಿಷೇಕ್ ಹಾಗೂ ಮಗಳು ಆರಾಧ್ಯ, ಐಶ್ವರ್ಯ ಗಾಗಿ ಕೇಕ್ ತರಿಸಲಿದ್ದು ಸಂಜೆ ವೇಳೆಗೆ ಐಶ್ವರ್ಯ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ. 
ನ.1 1973ರಂದು ಮಂಗಳೂರಿನಲ್ಲಿ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈದಂಪತಿಗಳ ಮಗಳಾಗಿ ಜನಿಸಿದ ಐಶ್ವರ್ಯ ಮುಂಬೈ ನ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. ತಾವು 9ನೇ ತರಗತಿಯಲ್ಲಿದ್ದಾಗ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಆಯ್ಕೆಯಾಗಿದ್ದ ಈಕೆ 1994ರಲ್ಲಿ  ವಿಶ್ವ ಸುಂದರಿ ಪ್ರಶಸ್ತಿ ಗಳಿಸಿ ಪ್ರಸಿದ್ದರಾದರು. ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಐಶ್ವರ್ಯ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿ 2011ರ ನ.16ರಂದು ಆರಾಧ್ಯಳಿಗೆ ತಾಯಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!